ನ್ಯೂಸ್

ಢಾಕಾ ವಿಮಾನ ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ; ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ| Bangladesh

Bangladesh: ಬಾಂಗ್ಲಾ ದೇಶದ ರಾಜಧಾನಿ ಢಾಕಾದ ವಿಮಾನ ನಿಲ್ದಾಣದ ಸರಕು ಸಾಗಾಣೆ ಪ್ರದೇಶದಲ್ಲಿ ಇಂದು(ಅ. 18) ಮಧ್ಯಾಹ್ನ 2.15ರ ಸುಮಾರಿಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ತಾತ್ಕಾಲಿವಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಬಾಂಗ್ಲಾ ಏರ್​ಲೈನ್ಸ್​ ವಕ್ತಾರ ಕೌಸರ್ ಮಹಮ್ಮದ್ ಹೇಳಿಕೆ ಉಲ್ಲೇಖಿಸಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದ್ದು, ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಳಿಕ ವಿಮಾನ ನಿಲ್ದಾಣದ ಅಗ್ನಿಶಾಮಕದಳ, ವಾಯುಪಡೆಯ ಅಗ್ನಿಶಾಮಕ ಘಟಕ ಮತ್ತು ಇತರ ಸಂಬಂಧಪಟ್ಟ ಏಜೆನ್ಸಿಗಳ ತಂಡಗಳು ತಕ್ಷಣವೇ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿವೆ ಎಂದು ಹೇಳಿದೆ. (ಏಜೆನ್ಸೀಸ್)