ಮುಂಬೈ: ಮಾಜಿ ಸೇನಾಧಿಕಾರಿ ಮತ್ತು ನಟ ಬಿಕ್ರಮ್ಜೀತ್ ಕನ್ವರ್ಪಾಲ್ ಅವರು ಕರೊನಾದಿಂದಾಗಿ ಸಾವಪ್ಪಿದ್ದಾರೆ. ವೆಬ್ ಧಾರಾವಾಹಿ ಸ್ಪೆಷಲ್ ಆಪ್ಸ್ನ ಖ್ಯಾತಿಯ ಕನ್ವರ್ಪಾಲ್, ಹಲವಾರು ಹಿಂದಿ ಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರು, 'ಮೇಜರ್ ಕನ್ವರ್ಲಾಲ್ ಅವರನ್ನು ಕ್ರೂರ ಸಾಂಕ್ರಾಮಿಕವು ನಮ್ಮಿಂದ ದೂರ ಮಾಡಿದೆ' ಎಂದು ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿ ಸಂತಾಪ ಸೂಚಿಸಿದ್ದಾರೆ. ರಿಚಾ ಚಡ್ಡಾ, ನೀಲ್ ನಿತಿನ್ ಮುಖೇಶ್, ಅಶೋಕ್ ಪಂಡಿತ್ ಸೇರಿದಂತೆ ಸಿನಿಮಾ ರಂಗದ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೇನೆಯಲ್ಲಿ ಮೇಜರ್ ಆಗಿದ್ದ ಬಿಕ್ರಮ್ಜೀತ್ ಕನ್ವರ್ಪಾಲ್ ಅವರು ನಿವೃತ್ತರಾದ ಮೇಲೆ 2003 ರಲ್ಲಿ ನಟನೆ ಆರಂಭಿಸಿದ್ದರು. ಪೇಜ್ 3, ರಾಕೆಟ್ ಸಿಂಗ್: ಸೇಲ್ಸ್ಮನ್ ಆಫ್ ದ ಇಯರ್, ಆರಕ್ಸಣ್, ಮರ್ಡರ್ 2, ಟು ಸ್ಟೇಟ್ಸ್, ದ ಘಾಜಿ ಅಟ್ಯಾಕ್, ಕ್ರಿಯೇಚರ್ 3ಡಿ, ಹಾರರ್ ಸ್ಟೋರಿ, ಬೈಪಾಸ್ ರೋಡ್ ಮುಂತಾದ ಚಲನಚಿತ್ರಗಳಲ್ಲಿ ಅವರು ನಟಿಸಿದ್ದರು. ದಿಯಾ ಔರ್ ಬಾತಿ ಹಮ್, ಏ ಹೇ ಚಾಹತೇ, ದಿಲ್ ಹಿ ತೊ ಹೇ ಮತ್ತು ನಟ ಅನಿಲ್ ಕಪೂರ್ ಅವರ 24 ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದರು. (ಏಜೆನ್ಸೀಸ್)