ಪೊಲೀಸ್ ಇಲಾಖೆಯಿಂದ ನಿವೃತ್ತರಾದ ಎ.ವಜೀರ್ ಅಹಮದ್, ರಮೇಶ್ ಅವರನ್ನು ಜಿ.ಕೆ.ಮಿಥುನ್‌ಕುಮಾರ್ ಸನ್ಮಾನಿಸಿದರು. ಜಿ.ವಿಜಯಕುಮಾರ್, ಸುನೈನಾ, ವೀರೇಶಪ್ಪ, ಡಾ.ಸುಹಾನಾ, ಶಹಾನಾ ಬೇಗಂ ಮುಂತಾದವರಿದ್ದರು. 
ನ್ಯೂಸ್

ನಿವೃತ್ತಿ ನಂತರವೂ ಇಲಾಖೆ ಗೌರವ ಕಾಪಾಡಿ

ಶಿವಮೊಗ್ಗ: ನಿವೃತ್ತಿ ನಂತರದ ಬದುಕನ್ನು ಸುಂದರ ಹಾಗೂ ಆರೋಗ್ಯಕರವಾಗಿ ರೂಪಿಸಿಕೊಳ್ಳಬೇಕು. ಪೊಲೀಸ್ ಇಲಾಖೆ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಯಲ್ಲಿದೆ. ಸಮಸ್ಯೆ ಎದುರಾದರೆ ಈ ಸೇವೆಯನ್ನು ಕುಟುಂಬದ ಎಲ್ಲರೂ ಬಳಸಿಕೊಳ್ಳಬಹುದು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಸೇವೆಯಿಂದ ನಿವೃತ್ತರಾದ ಸಿಬ್ಬಂದಿಯನ್ನು ಬೀಳ್ಕೊಟ್ಟು ಮಾತನಾಡಿದ ಅವರು, ಸೇವಾವಧಿಯಲ್ಲಿ ಉತ್ತಮ ಕೆಲಸ ಮಾಡಿ ಇಲಾಖೆಗೆ ಗೌರವ ತರುವ ಸಿಬ್ಬಂದಿ, ನಿವೃತ್ತಿ ನಂತರವೂ ಪೊಲೀಸ್ ಇಲಾಖೆ ಗೌರವ ಕಾಪಾಡಬೇಕು ಎಂದರು.
32 ವರ್ಷಗಳಿಂದ ಸಾಗರ, ಭದ್ರಾವತಿ, ದೊಡ್ಡಪೇಟೆ ಹಾಗೂ ಸಂಚಾರ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಎಎಸ್‌ಐ ಎ.ವಜೀರ್ ಅಹಮದ್ ಹಾಗೂ ಶಿವಮೊಗ್ಗ, ಕುಂಸಿ ಮುಂತಾದೆಡೆ ಕಾರ್ಯನಿರ್ವಹಿಸಿದ್ದ ಎಎಸ್‌ಐ ರಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಎ.ವಜೀರ್ ಅಹಮ್ಮದ್ ಮಾತನಾಡಿ, ಸುದೀರ್ಘ ಸೇವೆ ನನಗೆ ತೃಪ್ತಿ ತಂದಿದೆ. ಸಾರ್ವಜನಿಕವಾಗಿ ಗೌರವ ಸಿಕ್ಕಿದೆ. ಇಲಾಖೆಯಲ್ಲಿ 32 ವರ್ಷ ಯಾವುದೇ ಕಳಂಕ ಬಾರದ ರೀತಿ ಕಾರ್ಯನಿರ್ವಹಿಸಿದ ಸಮಾಧಾನವಿದೆ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಪ್ರಮುಖರಾದ ಡಾ. ಸುಹಾನಾ, ಸುನೈನಾ, ಶಹಾನಾ ಬೇಗಂ, ನಿವೃತ್ತ ಎಎಸ್‌ಐ ವೀರೇಶಪ್ಪ ಇತರರಿದ್ದರು.