ಹಿರೀಸಾವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮಹೇಶ್, ಉಪಾಧ್ಯಕ್ಷೆ ನಂದಿನಿ ಹಾಗೂ ನಿರ್ದೇಶಕರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಶುಕ್ರವಾರ ಅಭಿನಂದಿಸಿದರು. 
ನ್ಯೂಸ್

ಹಿರೀಸಾವೆ ಸಹಕಾರ ಸಂಘಕ್ಕೆ ಮಹೇಶ್ ಅಧ್ಯಕ್ಷ

ಹಿರೀಸಾವೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಎಚ್.ಜೆ.ಮಹೇಶ್, ಉಪಾಧ್ಯಕ್ಷೆ ಸಿ.ಬಿ.ನಂದಿನಿ ಹಾಗೂ ನಿರ್ದೇಶಕರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಶುಕ್ರವಾರ ಅಭಿನಂದಿಸಿದರು.

ಬಳಿಕ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಂಘದ ಮೂಲಕ ವ್ಯಾಪ್ತಿಯ 2950 ರೈತರಿಗೆ ಶೂನ್ಯ ಬಡ್ಡಿ ದರ ಹಾಗೂ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗಿದೆ. ಜತೆಗೆ ತೂಬಿನಕೆರೆ ಹಾಗೂ ಕೊತ್ತನಹಳ್ಳಿ ಗ್ರಾಮಕ್ಕೆ ತಿಂಗಳಲ್ಲಿ 2 ದಿನಗಳು ಅದೇ ಗ್ರಾಮಗಳಲ್ಲಿಯೇ ಪಡಿತರ ಪದಾರ್ಥಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದ್ದು ಇದರಿಂದ ವೃದ್ಧರಿಗೆ ಹಾಗೂ ಕೈಲಾಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಹಿಂದೆ ಒಂದು ಸಮಯದಲ್ಲಿ ಸಂಘ ಹಾಗೂ ಬ್ಯಾಂಕ್ 50 ಲಕ್ಷ ರೂ. ಗ್ಯಾಪ್ ಹೊಂದಿತ್ತು. ವೈದ್ಯನಾಥನ್ ವರದಿ ಪ್ರಕಾರ 50 ಲಕ್ಷ ರೂ. ಕಲ್ಪಿಸಲಾಗಿದ್ದು ಪ್ರಸ್ತುತ ದಿನಗಳಲ್ಲಿ ಸಂಘವು ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಶರೀಪ್ ಕರ್ತವ್ಯ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷೆ ಸಿ.ಬಿ. ನಂದಿನಿ, ನಿರ್ದೇಶಕರಾದ ಎಚ್.ಈ.ಬೋರಣ್ಣ, ಎಚ್.ಎಂ.ನಾಗೇಶ್, ಎಚ್.ಎಂ.ಕೃಷ್ಣಪ್ಪ, ಕೆಂಪೇಗೌಡ, ಎಚ್.ಎಸ್.ಹೇಮಂತ್, ಎಚ್.ವಿ. ಬಾಬು, ಎಚ್.ಎನ್.ಮಂಜುನಾಥ್, ನರಸಿಂಹಮೂರ್ತಿ, ಗೀತಾ, ಮುಖಂಡರಾದ ಎಚ್.ಜೆ.ದಿನೇಶ್, ಬಾಬು, ಕಾರ್ಯನಿರ್ವಣಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿ ಇದ್ದರು.