ನ್ಯೂಸ್

‘ರಾಯನ್​’​ನಲ್ಲಿ ಧನುಷ್​ ಅಭಿನಯಕ್ಕೆ ಪ್ರಿನ್ಸ್​ ಫಿದಾ; ಸೂಪರ್​ಸ್ಟಾರ್ ಹೇಳಿದ್ದೇನು ಗೊತ್ತಾ?

ಹೈದರಾಬಾದ್​​: ತಮಿಳು ನಟ ಧನುಷ್​​ ಅಭಿನಯಿಸಿ ಆ್ಯಕ್ಷನ್​​ ಕಟ್​ ಹೇಳಿರುವ ಸಿನಿಮಾ ರಾಯನ್​​​​ ಜುಲೈ 26ರಂದು ಬಿಡುಗಡೆಗೊಂಡಿದೆ. ಇದು ಧನುಷ್​ ಅಭಿನಯದ 50ನೇ ಚಿತ್ರವಾಗಿದೆ. ಸಿನಿಮಾ ರಿಲೀಸ್​ ಆದ ಮೊದಲ ವಾರಾಂತ್ಯದಲ್ಲೇ 42.65 ಕೋಟಿ ರೂಪಾಯಿ ಗಳಿಸಿದೆ. ತೆಲುಗು ಮತ್ತು ತಮಿಳು ವಿಮರ್ಶಕರಿಂದ ರಾಯನ್​​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಕ್ಕೆ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ.

ಇದೀಗ ರಾಯನ್​ ಸಿನಿಮಾ ನೋಡಿ ತೆಲುಗು ಸೂಪರ್​ಸ್ಟಾರ್​​​ ಮಹೇಶ್​ಬಾಬು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಹೇಶ್​ ಬಾಬು ರಾಯನ್​ ಒಂದು ವಿಶಿಷ್ಟ ಮತ್ತು ಅದ್ಭುತ ಚಿತ್ರವಾಗಿದೆ. ಇದರಲ್ಲಿ ಧನುಷ್​ ಅದ್ಭುತವಾಗಿ ನಟಿಸಿದ್ದು ಮಾತ್ರವಲ್ಲದೆ.. ನಿರ್ದೇಶನವನ್ನೂ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಲೇಬೇಕು ಎಂದರು ಹೇಳಿದ ಅವರು ಎಸ್.ಜೆ.ಸೂರ್ಯ, ಪ್ರಕಾಶ್ ರಾಜ್, ಸಂದೀಪ್ ಕಿಶನ್ ಹಾಗೂ ಇತರ ನಟರ ನಟನೆಯನ್ನು ಶ್ಲಾಘಿಸಿದರು.

ಸಿನಿಮಾ ಮತ್ತು ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿದ ಮಹೇಶ್ ಬಾಬು ಅವರಿಗೆ ಧನುಷ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ಆ್ಯಕ್ಷನ್-ಪ್ಯಾಕ್ಡ್ ರಾಯನ್ ಸಿನಿಮಾದಲ್ಲಿ ಎಸ್‌.ಜೆ.ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಸರವಣನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ಅವರ ನಿರ್ದೇಶನದ ಗುಂಟೂರು ಕಾರಂ ಚಿತ್ರದಲ್ಲಿ ಶ್ರೀಲೀಲಾ ಜತೆಗೆ ಮಹೇಶ್ ಬಾಬು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ನಟ ತನ್ನ ಬಹುನಿರೀಕ್ಷಿತ ಚಿತ್ರ SSMB 29 ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ನಿರ್ದೇಶಿಸಲಿದ್ದಾರೆ.(ಏಜೆನ್ಸೀಸ್​​)