ಆಂಧ್ರಪ್ರದೇಶ: ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಗುಂಟೂರು ಕಾರಂ' 2024ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಲಿದೆಯಾ? ಎಂಬ ಫ್ಯಾನ್ಸ್ ಪ್ರಶ್ನೆಗಳಿಗೆ ಇದೀಗ ಸ್ವತಃ ನಟ ಮಹೇಶ್ ಅವರೇ ಉತ್ತರಿಸಿದ್ದಾರೆ.
ಇದನ್ನೂ ಓದಿ: ಡಿ.ದೇವರಾಜ ಅರಸು ಜಾರಿಗೆ ತಂದ ಯೋಜನೆಗಳು ಅನುಕರಣೀಯ
ನಟ ಮಹೇಶ್ ಬಾಬು ಅವರ 'ಗುಂಟೂರು ಕಾರಂ' ಚಿತ್ರದ ಉಳಿದ ಚಿತ್ರೀಕರಣ ಕೆಲಸಗಳು ಇತ್ತೀಚೆಗಷ್ಟೇ ಪುನಾರಂಭಗೊಂಡಿದ್ದು, ಚಿತ್ರವು ಶೀಘ್ರವೇ ಪೋಸ್ಟ್ ಪ್ರೋಡಕ್ಷನ್ ಕಾರ್ಯಗಳನ್ನು ಮುಗಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. 'ಅತ್ತಾಡು' ಮತ್ತು 'ಖಲೇಜಾ' ನಂತರ ಮಹೇಶ್ ಬಾಬು ಜತೆ ಮತ್ತೊಮ್ಮೆ ಕೈಜೋಡಿಸಿರುವ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಅವರಿಗೆ ಇದು ಮೂರನೇ ಚಿತ್ರ. ಇವರಿಬ್ಬರ ಕಾಂಬಿನೇಷನ್ ಸಿನಿಪ್ರೇಕ್ಷಕರನ್ನು ಯಾವ ರೀತಿ ಸೆಳೆಯಲಿದೆ ಎಂಬುದನ್ನು ಚಿತ್ರ ರಿಲೀಸ್ ಆದ ಬಳಿಕ ಕಾದುನೋಡಬೇಕಿದೆ.
ಈ ಹಿಂದೆ ಗುಂಟೂರು ಕಾರಂ ಚಿತ್ರತಂಡ ಶೂಟಿಂಗ್ ವೇಳಾಪಟ್ಟಿಯಲ್ಲಿ ನಿರಂತರ ವಿಳಂಬವಾಗುತ್ತಿದೆ. ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಇದರೊಟ್ಟಿಗೆ ಈ ಚಿತ್ರ 2024ರ ಸಂಕ್ರಾಂತಿಗೆ ಬಿಡುಗಡೆಯಾಗುವುದಿಲ್ಲ ಎಂದು ಮಹೇಶ್ ಬಾಬು ಫ್ಯಾನ್ಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ನಡೆದ 'ಬಿಗ್ ಸಿ' 20 ವರ್ಷಗಳ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಮಾತನಾಡಿದ ಮಹೇಶ್ ಬಾಬು, ಚಿತ್ರವು 2024ರ ಸಂಕ್ರಾಂತಿಗೆ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಇದೀಗ ಸಂತಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).