ರಿಪ್ಪನ್‌ಪೇಟೆಯ ಕಂತೇಸಿದ್ಧೇಶ್ವರ ದೇಗುಲದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗೆ ವಿಶೇಷಾಲಂಕಾರ ಪೂಜೆ ನೆರವೇರಿತು. 
ನ್ಯೂಸ್

ಮುಂಜಾನೆವರೆಗೂ ವಿಶೇಷ ಪೂಜೆ

ಜಿ. ಗಜೇಂದ್ರ

ರಿಪ್ಪನ್‌ಪೇಟೆ: ಮಹಾಶಿವರಾತ್ರಿ ನಿಮಿತ್ತ ಶಿವಾಲಯಗಳಲ್ಲಿ ಜಾಗರಣೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಕೆರೆಹಳ್ಳಿ, ಗವಟೂರು ರಾಮೇಶ್ವರ ದೇವಸ್ಥಾನ, ಕೋಡೂರು, ಗುಳಗುಳಿಶಂಕ್ರೇಶ್ವರ ದೇವಸ್ಥಾನ, ಕುಕ್ಕಳಲೆ, ನೆವಟೂರು ಕಾಶಿ ವಿಶ್ವನಾಥ ದೇವಸ್ಥಾನ, ಬರುವೆ ಕಲಾನಾಥೇಶ್ವರ, ಅರಸಾಳು ಮುಡುಬದ ಈಶ್ವರ ದೇವಸ್ಥಾನ, ಸಿದ್ಧಪ್ಪನಗುಡಿ ಕಂತೆ ಸಿದ್ದೇಶ್ವರ ದೇಗುಲದಲ್ಲಿ ಶುಕ್ರವಾರ ರಾತ್ರಿ ಆರಂಭವಾದ ರುದ್ರಾಭಿಷೇಕ, ಬಿಲ್ವಾರ್ಚನೆ, ನಾರಿಕೇಳ ಅಭಿಷೇಕ ಸೇರಿದಂತೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಮುಂಜಾನೆಯವರೆಗೂ ನಡೆಯಿತು. ಭಕ್ತಾದಿಗಳು ಭಜನೆ, ಕೀರ್ತನೆ, ಶಿವನಾಮಗಳನ್ನು ಜಪಿಸುತ್ತ ಭಕ್ತಿಪರವಶರಾದರು. ಶನಿವಾರ ಬೆಳಗ್ಗೆ ಶಿವನಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯೊಂದಿಗೆ ಮಹಾಶಿವರಾತ್ರಿ ಸಂಪನ್ನಗೊಂಡಿತು.