ನವದೆಹಲಿ: ಮದುವೆ ಸಮಾರಂಭಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಮೇಕಪ್, ಆಭರಣಗಳನ್ನು ಧರಿಸಲು ಆಸಕ್ತಿ ತೋರಿಸುತ್ತಾರೆ. ಕೆಲವರು ಸಾಂಪ್ರದಾಯಿಕ ಬಟ್ಟೆ ಮತ್ತು ಆಭರಣಗಳನ್ನು ಆಯ್ಕೆ ಮಾಡಿದರೆ ಕೆಲವರು ಟ್ರೆಂಡ್ ಅನ್ನು ಅನುಸರಿಸುತ್ತಾರೆ.
ಇತ್ತೀಚೆಗಷ್ಟೇ ಬೇಬಿ ಶವರ್‌ಗಾಗಿ ಮಹಿಳೆಯೊಬ್ಬರು ಧರಿಸಿರುವ ಡ್ರೈ ಫ್ರೂಟ್ಸ್ ಆಭರಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಹಿಳೆ ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು, ಹೇರ್ ಬ್ಯಾಂಡ್, ಬಾದಾಮಿ, ಗೋಡಂಬಿ, ಪಿಸ್ತಾ, ಹಸಿರು ಏಲಕ್ಕಿ ಇತ್ಯಾದಿಗಳಿಂದ ಆಭರಣವನ್ನು ಅಲಂಕರಿಸಿದ್ದಾರೆ. 11 ಮಿಲಿಯನ್ ವೀಕ್ಷಣೆಗಳನ್ನು ದಾಟಿರುವ ವಿಡಿಯೋವನ್ನು ನೆಟಿಜನ್‌ಗಳು ಟೀಕಿಸಿದ್ದಾರೆ. ಕೆಲವು ಮಹಿಳೆಯರು ಹಾಗಿದ್ರೆ ಬಂಗಾರ, ಬೆಳ್ಳಿ, ಆರ್ಟಿಫಿಶಿಲಯ್ ಆಭರಣಗಳು ಯಾವುದು ಬೇಡವಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಡ್ರೈ ಫ್ರೂಟ್ಸ್ ಜ್ಯುವೆಲ್ಲರಿ ವಿಡಿಯೋ ನೋಡಿದ ನೆಟ್ಟಿಗರು 'ಆಹಾರವನ್ನು ಪೋಲು ಮಾಡುತ್ತಿದ್ದಾರೆ...ದಯವಿಟ್ಟು ಈ ರೀತಿ ಮಾಡುವುದನ್ನು ನಿಲ್ಲಿಸಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಹೊಸ ಟ್ರೆಂಡ್.. ತುಂಬಾ ಶ್ರೀಮಂತರಿರಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಆಭರಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.