ನ್ಯೂಸ್

ಮಹಾಮಾರಿ ಕರೊನಾಗೆ ದೇಶದಲ್ಲಿ ಮತ್ತೊಂದು ಬಲಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ನವದೆಹಲಿ: ಕಿಲ್ಲರ್​ ಕರೊನಾ ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ. 10 ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 11 ಮಂದಿ ಸಾವಿಗೀಡಾಗಿದ್ದಾರೆ.

ಮುಂಬೈನಲ್ಲಿ ಕರೊನಾ ಸೋಂಕಿಗೆ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಸ್ಸಾಗಿದ್ದರು. ಮುಂಬೈ ಕಸ್ತೂರ ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮೃತಪಟ್ಟಿದ್ದ ವೃದ್ಧನಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಸದ್ಯ ಭಾರತದಲ್ಲಿ ಕೋವಿಡ್​-19 ತಗುಲಿರುವ ಸಂಖ್ಯೆ 511ಕ್ಕೇರಿದ್ದು, 12 ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೂ ಒಟ್ಟು 11 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)