ಮಹಾರಾಷ್ಟ್ರ: ಜೈ ಶ್ರೀ ರಾಮ್ ಎಂದು ಕೂಗಲು ನಿರಾಕರಿಸಿದ್ದಕ್ಕಾಗಿ ಮುಸುಕುಧಾರಿಗಳು ಮಹಾರಾಷ್ಟ್ರದ ಇಮಾಮ್ ಮೇಲೆ ಹಲ್ಲೆ ಮಾಡಿ ಗಡ್ಡವನ್ನು ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಸುಕುಧಾರಿ ಅಪರಿಚಿತ ವ್ಯಕ್ತಿಗಳು ಮಸೀದಿ ಇಮಾಮ್ ಒಬ್ಬರಿಗೆ ಹಲ್ಲೆಗೈದು ಅವರ ಗಡ್ಡವನ್ನು ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ ಮಸೀದಿಯೊಂದರಲ್ಲಿ ಇಮಾಮ್ ಆಗಿರುವ (ಧರ್ಮ ಗುರು) ಜಾಕಿರ್ ಸಯ್ಯದ್ ಖಾಜಾ ಅವರು ಖುರಾನ್ ಓದುತ್ತಿದ್ದರು. ಸಂಜೆ 7.30ರ ಸುಮಾರಿಗೆ ಮಸೀದಿಯೊಳಗೆ ಮುಸುಕುಧಾರಿಗಳ ಗುಂಪೊಂದು ಬಂದಿದೆ. "ಜೈ ಶ್ರೀರಾಮ್" ಹೇಳಿ ಎಂದು ಬಲವಂತಪಡಿಸಿದ್ದಾರೆ. ಇಮಾಮ್ ಇದಕ್ಕೆ ಒಪ್ಪದ ಕಾರಣ ಮೂವರು ಅಪರಿಚಿತ ವ್ಯಕ್ತಿಗಳು ಮೊದಲು ಹಲ್ಲೆ ನಡೆಸಿ ಅಮಲು ಪದಾರ್ಥವನ್ನು ಹಾಕಿರುವ ಬಟ್ಟೆಯಿಂದ ಮುಖಕ್ಕೆ ಒತ್ತಿದ್ದಾರೆ. ಇದರಿಂದ ಇಮಾಮ್ ಪ್ರಜ್ಞೆ ತಪ್ಪಿಸಿ ಅವರ ಗಡ್ಡವನ್ನು ಕತ್ತರಿಸಿ ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ.
ರಾತ್ರಿ 8 ಗಂಟೆಗೆ ಜನರು ಪ್ರಾರ್ಥನೆಗಾಗಿ ಮಸೀದಿಗೆ ಬಂದಾಗ, ಇಮಾಮ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಅವರು ಕಂಡು ಬಂದಿದೆ. ನಂತರ ಇಮಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರೀಶಿಲನೆ ನಡೆಸಿ ಮುಸುಕುಧಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.