ನ್ಯೂಸ್

6 ರಾಜ್ಯ ಕಾಯ್ದೆಗಳನ್ನು ಅಪರಾಧ ಮುಕ್ತಗೊಳಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ!|Maharashtra

Maharashtra : ಕೇಂದ್ರ ಸರ್ಕಾರದ ಉಪಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಮಹಾರಾಷ್ಟ್ರ ರಾಜ್ಯ ಸರ್ಕಾರವು ಆಡಳಿತದಲ್ಲಿರುವ ಆರು ಕಾಯ್ದೆಗಳನ್ನು ಅಪರಾಧ ಮುಕ್ತಗೊಳಿಸಲು ಮುಂದಾಗಿದೆ.

ಆದಾಗ್ಯೂ, ಕೇಂದ್ರ ಸರ್ಕಾರ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯೇಟ್ ನೇಮಿಸಿರುವ ಈ ಕಾರ್ಯಪಡೆಯು ವಿವಿಧ ಕಾಯ್ದೆಗಳಲ್ಲಿನ ದಂಡ ಮತ್ತು ಕ್ರಿಮಿನಲ್ ನಿಬಂಧನೆಗಳನ್ನು ಪರಿಶೀಲಿಸುವ ಮೂಲಕ ಜನರಿಗೆ ಪರಿಹಾರ ನೀಡಲು 23 ಆದ್ಯತೆಯ ವಲಯಗಳು ಮತ್ತು 71 ಉಪ ವಲಯಗಳನ್ನು ಪರಿಶೀಲನೆ ನಡೆಸಿದೆ.

ಅವುಗಳಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವಾಸ್ ಕಾಯ್ದೆ ಜಾರಿಗೆ ಬರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸುತ್ತಿವೆ. ವಿವಿಧ ರಾಜ್ಯ ಕಾಯ್ದೆಗಳಲ್ಲಿ ಮಾಡಲಾದ ಕ್ರಿಮಿನಲ್​ ನಿಬಂಧನೆಗಳ ಕುರಿತು ಸ್ವತಂತ್ರ ಚಿಂತಕರ ಚಾವಡಿ ಮತ್ತು ಕಾನೂನು ನೀತಿ ಕೇಂದ್ರವು ಅಧ್ಯಯನ ನಡೆಸಿದೆ.

ಈ ನಿಬಂಧನೆಗಳು 1960ರ ಮಹಾರಾಷ್ಟ್ರ ಸಹಕಾರಿ ಸಂಘಗಳ ಕಾಯ್ದೆ, 1961 ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಕಾಯ್ದೆ, 1971 ರ ಮಹಾರಾಷ್ಟ್ರ ಕಾರ್ಮಿಕ ಸಂಘಗಳ ಗುರುತಿಸುವಿಕೆ ಕಾಯ್ದೆ, 1958ರ ಮಹಾರಾಷ್ಟ್ರ ಮುದ್ರಾಂಕ ಕಾಯ್ದೆ, 1946ರ ಬಾಂಬೆ ಕೈಗಾರಿಕಾ ಸಂಬಂಧ ಕಾಯ್ದೆ, 1966ರ ಮಹಾರಾಷ್ಟ್ರ ಭೂ ಕಂದಾಯ ಸಂಹಿತೆ ನಿಬಂಧನೆಗಳ ಉಲ್ಲಂಘನೆಗಾಗಿ ದಂಡದ ಕ್ರಮ ಮತ್ತು ಜೈಲು ಶಿಕ್ಷೆಯನ್ನು ಈ ಕಾಯ್ದೆ ಸೂಚಿಸುತ್ತದೆ.

ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಠಿಣ ನಿಬಂಧನೆಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಆ ಕಾಯ್ದೆಗಳ ನಿಬಂಧನೆಗಳು ಅಗತ್ಯವಿದಿಯೇ ಅಥವಾ ಸರಳೀಕರಿಸಬಹುದೇ ಎಂಬುದರ ಕುರಿತು ವಿಚಾರ ನಡೆಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ವಿಶ್ವಾಸ್​ ಕಾಯ್ದೆಯನ್ನು ಜಾರಿಗೆ ತರಲು ನೋಡಲ್​ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಜಿಆರ್​ ತಿಳಿಸಿದೆ. (ಏಜೆನ್ಸೀಸ್​)