ನ್ಯೂಸ್

ಮಹರಾಷ್ಟ್ರ ಪ್ರವಾಹ : ಜನರ ರಕ್ಷಣೆಗೆ ಧಾವಿಸಿದ ಎನ್​ಡಿಆರ್​ಎಫ್​ | NDRF

NDRF: ಮಹಾರಾಷ್ಟ್ರದ ಮರಾಠವಾಡದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಬೀಡ್ ಜಿಲ್ಲೆಯ ಅಷ್ಟಿ ತಾಲೂಕಿನಲ್ಲಿ 44 ಜನರು ಮತ್ತು ಛತ್ರಪತಿ ಸಂಭಾಜಿನಗರದ ಸಿಲ್ಲೋದ್ ತಾಲೂಕಿನಲ್ಲಿ 5 ಜನರು ಪ್ರವಾಹದಲ್ಲಿ ಸಿಲುಕಿಕೊಂಡಿರುವ ಮಾಹಿತಿ ಬಂದಿದೆ.

ಈ ವೇಳೆ ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡ ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಸ್ಥಳಕ್ಕೆ ಲಗ್ಗೆ ಇಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇನ್ನು ಬೀಡ್​ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದ್ದು, ಹಲವಾರು ಹಳ್ಳಿಗಳ ಮೇಲೆ ಪ್ರಭಾವ ಬೀರಿದೆ.

ಅಷ್ಟಿ ತಾಲೂಕಿನಲ್ಲಿ ಪ್ರವಾಹದಿಂದ ಪೀಡಿತ ಗ್ರಾಮಗಳಲ್ಲಿ ಕಡ, ಶೋಭಾ ನಿಮ್ಗಾಂವ್, ಘಾಟಾ ಪಿಂಪ್ರಿ, ಪಿಂಪಾರ್ಖೇಡ್ ಮತ್ತು ಧನೋರಾ ಸೇರಿವೆ, ಜಿಲ್ಲಾಡಳಿತವು ರಕ್ಷಣಾ ಮತ್ತು ನೆರವು ಕಾರ್ಯಾಚರಣೆಗಳಿಗಾಗಿ ಸೇನಾ ಘಟಕಗಳು ಮತ್ತು ಎನ್‌ಡಿಆರ್‌ಎಫ್‌ನಿಂದ ಸಹಾಯವನ್ನು ಕೋರಿದೆ. ಹೆಲಿಕಾಪ್ಟರ್ ರಕ್ಷಣಾ ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ.

ಪ್ರವಾಹದಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದು, ಅವರನ್ನು ವಿಮಾನ ಮೂಲಕ ಸಾಗಿಸಲು ನಾಸಿಕ್​ಗೆ ಕೋರಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮರಾಠವಾಡದ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಬೀಡ್ ಜಿಲ್ಲೆಯಲ್ಲಿ ಗರಿಷ್ಠ 37 ಮಿಮೀ ಮಳೆಯಾಗಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.

ಬೀಡ್‌ನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳೀಯ ಜಿಲ್ಲಾಡಳಿತದೊಂದಿಗೆ ಸಮನ್ವಯ ನಡೆಸುತ್ತಿದ್ದಾರೆ. ಇನ್ನು ಬೀಡ್‌ನ ಅಂಬಾಜೋಗೈ ತಾಲ್ಲೂಕು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬಿರುಕು ಉಂಟಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)