Maharashtra Accident: ಬುಧವಾರ (ಆಗಸ್ಟ್ 27) ಸಂಜೆ ಥಾಣೆಯ ಘೋಡ್‌ಬಂದರ್ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನ ಸಹಾಯಕ್ಕೆ ಧಾವಿಸಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿ ಮಾನವಿಯತೆ ಮೆರೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಸಿಎಂ ಶಿಂಧೆ ಥಾಣೆಯ ಕಿಸಾನ್ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಈ ವೇಳೆ ತಕ್ಷಣವೇ ತಮ್ಮ ಬೆಂಗಾವಲು ವಾಹನಗಳೆಲ್ಲಾ ನಿಲ್ಲಿಸಿ, ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಆರೋಗ್ಯ ವಿಚಾರಿಸಿದರು ಎಂದು ತಿಳಿದುಬಂದಿದೆ.
ಶಿಂಧೆ ಅವರ ಬೆಂಗಾವಲು ಪಡೆಯಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ಗಾಯಗೊಂಡ ವ್ಯಕ್ತಿಯನ್ನು ಘೋಡ್‌ಬಂದರ್‌ನಲ್ಲಿರುವ ಹಾರಿಜಾನ್ ಪ್ರೈಮ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಪಮುಖ್ಯಮಂತ್ರಿಗಳ ನಿಕಟ ಅಧಿಕಾರಿಯೊಬ್ಬರು ಯುವಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತಿದ್ದಾರೆ ಎನ್ನಲಾಗಿದೆ. ಸ್ವತಃ ಉಪಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿರುವುದರಿಂದ ಗಾಯಾಳುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತಾಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಾವು ಸುಮ್ಮನಿದ್ದ ಮಾತ್ರಕ್ಕೆ… 3 ತಿಂಗಳ ಬಳಿಕ ಮೌನ ಮುರಿದ ಆರ್ಸಿಬಿ, ಅಭಿಮಾನಿಗಳಿಗೆ ಬಿಗ್ ಅಪ್ಡೇಟ್! RCB
ಘಟನೆಗೂ ಮುನ್ನ ಗಣೇಶೋತ್ಸವದಲ್ಲಿ ಮಾತನಾಡಿದ್ದ ಶಿಂಧೆ, ಹಬ್ಬದ ಮಹತ್ವವನ್ನು ತಿಳಿಸುತ್ತಾ ಗಣೇಶೋತ್ಸವ ಪ್ರಾರಂಭವಾಗಿದ್ದು, ಇದು ಮಹಾರಾಷ್ಟ್ರದ ಅತಿದೊಡ್ಡ ಹಬ್ಬವಾಗಿದೆ, ಎಲ್ಲಾ ವರ್ಗದ ಜನರು ನಂಬಿಕೆ ಮತ್ತು ಆಚರಣೆಯಲ್ಲಿ ಒಟ್ಟಿಗೆ ಸೇರುವ ಸಮಯವಾಗಿದೆ ಎಂದಿದ್ದರು.(ಏಜೆನ್ಸೀಸ್)