ಮುಂಬೈ: ಈ ಬಾರಿಯ ಲಾಕ್ಡೌನ್ನಲ್ಲಿ ರೈಲು, ದೇಶೀಯ ವಿಮಾನ ಸಂಚಾರವನ್ನೂ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ. ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಿದೆ.
ಇದೀಗ ಮಹಾರಾಷ್ಟ್ರ ನಾಳೆ (ಮಾ.25)ರಿಂದಲೇ ದೇಶೀಯ ವಿಮಾನಗಳ ಹಾರಾಟ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದೆ.
ವಿಮಾನ ಸಂಚಾರದ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ. ಒಂದು ವಿಮಾನದಲ್ಲಿ 25 ಪ್ರಯಾಣಿಕರು ಮಾತ್ರ ಇರುವಂತೆ ನಿಯಮಗಳನ್ನು ರೂಪಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಹೇಳಿತ್ತು.
ಇದನ್ನೂ ಓದಿ: ರಿಲಯನ್ಸ್ನಿಂದ ಹೊಸ ಸರ್ವೀಸ್ ಪ್ರಾರಂಭ; ಅಮೆಜಾನ್, ಫ್ಲಿಪ್ಕಾರ್ಟ್ಗೆ ಪ್ರತಿಸ್ಪರ್ಧೆ ಕೊಡೋಕೆ ಬರ್ತಿದೆ ‘ಜಿಯೋ ಮಾರ್ಟ್’
ಅದರಂತೆಯೇ ಸೋಮವಾರದಿಂದಲೇ ಪ್ರಾರಂಭಿಸುವುದಾಗಿ ನಿರ್ಧಾರ ಪ್ರಕಟ ಮಾಡಿದ್ದು, ಮುಂಬೈನಿಂದ ಟೇಕ್ ಆಫ್ ಆಗುವ ಮತ್ತು ಮುಂಬೈ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವ ದೇಶೀಯ ವಿಮಾನಗಳ ಹಾರಾಟಕ್ಕೆ ಸೂಚನೆ ನೀಡಿದೆ. ಸದ್ಯ ವಿಮಾನಗಳಲ್ಲಿ 25 ಪ್ರಯಾಣಿಕರಿಗೆ ಮಾತ್ರ ಅವಕಾಶ ಇದ್ದು, ಈ ಸಂಖ್ಯೆಯನ್ನು ಕ್ರಮೇಣವಾಗಿ ಜಾಸ್ತಿ ಮಾಡಲಾಗುವುದು ಎಂದು ತಿಳಿಸಿದೆ.
ಜೈಪುರದಿಂದ ಹೊರಡಲಿರುವ ಮೊದಲ ಇಂಡಿಗೋ ಏರ್ಲೈನ್ ವಿಮಾನ ನಾಳೆ ಮುಂಜಾನೆ 6ಗಂಟೆಗೆ ಮುಂಬೈ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಲಿದೆ.
ವಿಮಾನ ಹಾರಾಟಕ್ಕೆ ಸಂಬಂಧಪಟ್ಟಂತೆ ಹೊಸ ಗೈಡ್ಲೈನ್ನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ. (ಏಜೆನ್ಸೀಸ್)