ನ್ಯೂಸ್

ಮೊನಾಲಿಸಾ ಈಗ ಮಾಡೆಲ್! ಬದಲಾಗಿ ಹೋಯ್ತು ಮಣಿ, ರುದ್ರಾಕ್ಷಿ ಮಾಲೆ ಮಾರುವ monalisa ಬದುಕು

Mahakumbh Mela:  ( monalisa ) ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ.  ಪ್ರಯಾಗ್ ರಾಜ್‌ನಲ್ಲಿ ಆರಂಭವಾದ ಈ ಅದ್ಧೂರಿ ಆಚರಣೆಗೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಅಘೋರರು ಆಗಮಿಸುತ್ತಿದ್ದಾರೆ.  ಈ ಮಹಾ ಕುಂಭಮೇಳದ ಸಂಭ್ರಮದಲ್ಲಿ ಹುಡುಗಿಯೊಬ್ಬಳು ವಿಶೇಷ ಆಕರ್ಷಣೆಯಾಗಿದ್ದಾಳೆ. ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಿರುವ ಆ ಹುಡುಗಿಯ ವಿಡಿಯೋಗಳು ಎಲ್ಲೆಡೆ ಕಾಣುತ್ತಿವೆ.  ಇದೀಗ ಈಕೆ ಮಾಡೆಲ್​ ಆಗಿ ಬದಲಾಗಿದ್ದಾಳೆ.
ಮಹಾಕುಂಭ ಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ಕೃಷ್ಣ ಸುಂದರಿ ಮೊನಾಲಿಸಾ ಭೋಸ್ಲೆ ರಾತ್ರೋರಾತ್ರಿ ಭಾರಿ ಸೆನ್ಸೇಶನ್ ಕ್ರಿಯೆಟ್ ಮಾಡಿದ್ದಳು.  ಬೆಳಗಾಗುವಷ್ಟರಲ್ಲೇ ಮೊನಾಲಿಸಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಳು. ಈಕೆಯನ್ನು ಹುಡುಕಿಕೊಂಡು ಸಾವಿರಾರು ಜನ ಆಗಮಿಸಿದ್ದರು.

ಮೊನಾಲಿಸಾ ಭೋಸ್ಲೆ ಇದೀಗ ಹೊಸ ಅಧ್ಯಾಯ ಆರಂಭಿಸಿದ್ದಾಳೆ. ಇದೀಗ ಮಣಿ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಅಲ್ಲ, ಮಾಡೆಲ್ ಕಮ್ ಕಂಟೆಂಟ್ ಕ್ರಿಯೇಟರ್ ಮೊನಾಲಿಸಾ.

ಜಗತ್ತನ್ನೇ ತನ್ನತ್ತ ಸೆಳೆಯುವ ಕಣ್ಣುಗಳು ಕೋಟ್ಯಾಂತರ ಭಾರತೀಯರ ಮನಸ್ಸು ಕದ್ದಿತ್ತು. ಮಹಾಕುಂಭದಲ್ಲಿ ಭದ್ರತೆ ಸಮಸ್ಯೆ, ವ್ಯಾಪಾರ ಸಮಸ್ಯೆ ಎದುರಿಸಿದ ಮೊನಾಸಿಲಾ ಇಂದೋರ್‌ಗೆ ಮರಳಿದ್ದಳು. ಆದರೆ ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಆಗಿರುವ ಮೊನಾಲಿಸಾ ಇದೀಗ ಸಂಪೂರ್ಣ ಬದಲಾಗಿದ್ದಾಳೆ. ಮಾಡೆಲ್ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಶಿಪ್ರಾ ಮೇಕ್ಓವರ್ ಬ್ಯೂಟಿ ಸಲೂನ್‌ನಲ್ಲಿ ಹೇರ್ ಸ್ಟ್ರೈಟನಿಂಗ್, ಮೇಕ್ ಅಪ್ ಮಾಡಿಸಿಕೊಂಡಿದ್ದಾಳೆ.

ಮೊನಲಿಸಾ ಸೌಂದರ್ಯ ಇದೀಗ ದುಪ್ಪಟ್ಟಾಗಿದೆ. ಮಾಡೆಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದೀಗ ಮೊನಾಲಿಸಾ ಭೋಸ್ಲೆ ಹೊಸ ವಿಡಿಯೋ ವೈರಲ್ ಆಗಿದೆ. ಮೊನಾಲಿಸಾ ಭೋಸ್ಲೆ ಅನ್ನೋ ಸೋಶಿಯಲ್ ಮೀಡಿಯಾ ಖಾತೆಗಳು ಆರಂಭಗೊಡಿದೆ. ಈ ಖಾತೆಗಳಲ್ಲಿ ಸುಂದರಿ ಮೊನಾಲಿಸಾ ವಿಡಿಯೋಗಳು ಪೋಸ್ಟ್ ಆಗಿದೆ.