ನ್ಯೂಸ್

ಮಾದೇಶ್ವರ ಸ್ವಾಮಿ ದನಗಳ ಜಾತ್ರಾ ಸಡಗರ

ಸರಗೂರು: ಸರಗೂರು ಸಮೀಪದ ನಿಲುವಾಗಿಲು ಮತ್ತು ತುಂಬಸೋಗೆಯಲ್ಲಿರುವ ನಿಲುವಾಗಿಲು ಮಾದೇಶ್ವರ ಸ್ವಾಮಿ ದನಗಳ ಜಾತ್ರಾಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.


ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿ ದಡೆಯಲ್ಲಿರುವ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಕಪಿಲಾ ನದಿಗೆ ದೇವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿಕೊಂಡು ಕೊಂಡಯ್ಯಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನ, ರುದ್ರಾಭಿಷೇಕ ಮಾಡಲಾಯಿತು. ಪುನಃ ಉತ್ಸವ ಮೂರ್ತಿಯನ್ನು ರಥದ ಮೂಲಕ ದೇವಸ್ಥಾನದ ಬಳಿಗೆ ಕರೆ ತರಲಾಯಿತು.


ಮೆರವಣಿಗೆ ವೇಳೆ ವೀರಗಾಸೆ, ವಾದ್ಯಗೋಷ್ಠಿಗಳು ಮೊಳಗಿದವು. ಉತ್ಸವ ಮೂರ್ತಿ ದೇವಸ್ಥಾನ ಬಳಿಗೆ ಬಂದ ಕೂಡಲೇ ದೇವಸ್ಥಾನ ಒಂದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಅನ್ನಸಂತರ್ಪಣೆ ನಡೆಯಿತು.