ನ್ಯೂಸ್

ಗಡಿನಾಡ ಕನ್ನಡಿರ ಓಲೈಕೆಗೆ 'ಮಹಾ' ಪ್ರಯತ್ನ

ವಿಜಯಪುರ: ರಾಜ್ಯದಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಉಲ್ಬಣಿಸಿದ್ದು, ಇದೀಗ ಅದರ ಬಿಸಿ ಮಹಾರಾಷ್ಟ್ರ ಸಚಿವರಿಗೂ ತಟ್ಟಿದೆ. ಕರ್ನಾಟಕಕ್ಕೆ ಬರಲಿರುವ ಮಹಾರಾಷ್ಟ್ರ ಸಚಿವರಿಗೆ ಇಲ್ಲಿಗೆ ಆಗಮಿಸಲು ಬಿಡಬಾರದು ಎಂದು ಬೆಳಗಾವಿ ಪೊಲೀಸ್​ ಕಮಿಷನರ್​ಗೆ ಮನವಿ ಮಾಡಲಾಗಿತ್ತು. ಇದೀಗ ಜತ್ತ ತಾಲೂಕಿನ ಗಡಿನಾಡ ಕನ್ನಡಿಗರನ್ನು ಓಲೈಸಲು ಮಹಾರಾಷ್ಟ್ರದ ಸಚಿವರೊಬ್ಬರು ಭೇಟಿ ನೀಡಿದ್ದಾರೆ.

ಈ ಹಿಂದೆ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆ ಆಗುತ್ತೇವೆ ಎಂದು ಜತ್ತ ತಾಲೂಕಿನ ಮಹಾರಾಷ್ಟ್ರ ಗಡಿ ಗ್ರಾಮಸ್ಥರು ಠರಾವು ಮಂಡಿಸಿದ್ದರು. ಇದರ ಪರಿಣಾಮ ಈಗ ಸ್ಪಷ್ಟವಾಗಿ ಕಾಣುತ್ತಿದೆ. ಕರ್ನಾಟಕ್ಕೆ ಸೇರಬೇಡಿ ಎಂದು ಮಹಾರಾಷ್ಟ್ರ ಕನ್ನಡಿಗರನ್ನು ಓಲೈಸಲು ಈಗ ಮಹಾ ಸರ್ಕಾರ ಮುಂದಾಗಿದೆ.

ಇದೀಗ ಗ್ರಾಮಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ರಾಜ್ಯದ ಕೈಗಾರಿಕಾ ಸಚಿವ ಉದಯ್ ಸಾಮಂತ್ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವ ಉದಯ್​ ಸಾಮಂತ್​ ತಿಕ್ಕುಂಡಿ ಗ್ರಾಮಕ್ಕೆ ಭೇಟಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಸಚಿವ ಉದಯ್ ಸಾಮಂತ್‌‌‌ ಗೆ ಮಹಾರಾಷ್ಟ್ರದ ಮುಖಂಡರು ಸಾಥ್ ನೀಡಿದ್ದಾರೆ. ಸಚಿವರ ಭೇಟಿ ಸಂದರ್ಭ ಗ್ರಾಮಸ್ಥರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ಈ ಹಿಂದೆ ಇದೇ ತಿಕ್ಕುಂಡಿ ಗ್ರಾಮದ ದ್ವಾರ ಬಾಗಿಲಿನ ಮೇಲೆ ಗ್ರಾಮಸ್ಥರು ಕನ್ನಡ ಧ್ವಜಾರೋಹಣ ಮಾಡಿದ್ದರು. ಇವರು ಸಿಎಂ ಬಸವರಾಜ್ ಬೊಮ್ಮಾಯಿಗೆ ಅಭಿನಂದಿಸಿ, ಕರ್ನಾಟಕ ರಾಜ್ಯ ಸೇರ್ಪಡೆಗೆ ಠರಾವು ಪಾಸ್ ಮಾಡಿದ್ದರು.