Vishwas Sarang: ಮಧ್ಯಪ್ರದೇಶದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ವಿಶ್ವಾಸ್ ಸಾರಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ 'ಮೇಡ್ ಇನ್ ಇಂಡಿಯಾ' ಕರೆಯನ್ನು ಅನುಸರಿಸಿ, ನರೇಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವದೇಶಿ ಉತ್ಪನ್ನಗಳ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡರು.ಹಾಗೇ ಈ ವೇಳೆ ಅಲ್ಲಿನ ವ್ಯಾಪಾರಿಗಳೊಂದಿಗೆ ಜೊತೆಗೂಡಿ, ಅಂಗಡಿಗಳಲ್ಲಿ 'ಸ್ವದೇಶಿ ವಸ್ತುಗಳ' ಬೋರ್ಡ್‌ಗಳನ್ನು ಅಂಟಿಸಿ, ಭಾರತೀಯ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಜನರನ್ನು ಆಹ್ವಾನಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ಉದ್ಯೋಗಕ್ಕೆ ಸೌಂದರ್ಯ ಒಂದು ಅಡ್ಡಿ! 50 ಬಾರಿ ಉದ್ಯೋಗ ಸಂದರ್ಶನಗಳನ್ನು ಮಾಡಿದ್ದೇನೆ ಕೆಲಸ ಸಿಕ್ಕಿಲ್ಲ.. job
ಮಧ್ಯಪ್ರದೇಶದ ಭೋಪಾಲ್ ನರೇಲಾ ಕ್ಷೇತ್ರದಲ್ಲಿ ಈ ಅಭಿಯಾನವನ್ನು ನಡೆಸಲಾಯಿತು. ಈ ವೇಳೆ ಸಚಿವ ಸಾರಂಗ್ ಸ್ವತಃ ಅವರೇ ಪ್ರತಿಯೊಂದು ಮಳಿಗೆಗಳಿಗೂ ಭೇಟಿ ನೀಡಿ ಸ್ವದೇಶಿ ವಸ್ತುಗಳ ಪೋಸ್ಟರ್ ಅಂಟಿಸಿದರು. ಇನ್ನು ಅಂಗಡಿ ಮಾಲೀಕರು ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡಿದುದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುದ್ದಿ ಮೂಲಗಳೊಂದಿಗೆ ಮಾತನಾಡಿದ ಸಾರಂಗ್, ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕೆಂದು ಮನವಿ ಮಾಡಿದ್ದಾರೆ. ಇದು ನಮ್ಮದೊಂದು ಚಿಕ್ಕ ಪ್ರಯತ್ನ. ಇಂದು ಮಾರುಕಟ್ಟೆಯಲ್ಲಿರುವ ಪ್ರತಿಯೊಬ್ಬರೂ ಈ ಅಭಿಯಾನಕ್ಕೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಆದರೆ, ಕೆಲವು ಅಂಗಡಿಗಳಲ್ಲಿ ಇನ್ನೂ ವಿದೇಶಿ ಉತ್ಪನ್ನಗಳು ಲಭ್ಯವಿದೆ. ಕ್ರಮೇಣ ಎಲ್ಲಾ ಸ್ವದೇಶಿ ವಸ್ತುಗಳ ಕಡೆಗೆ ಬದಲಾಗುವಂತೆ ನೋಡಿಕೊಳ್ಳಲು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಅತಿದೊಡ್ಡ ಶತ್ರು ಅವಲಂಬನೆ: ಜಗತ್ತನ್ನು ಎದುರಿಸಲು ಸ್ವಾವಲಂಬಿ ಭಾರತ ಅಗತ್ಯ ಎಂದ ಪ್ರಧಾನಿ ಮೋದಿ |PM Modi
ಭಾರತದಲ್ಲಿ ಮೊದಲ ಬಹಿಷ್ಕಾರ ಚಳುವಳಿಯು ಸಾಮಾನ್ಯವಾಗಿ 1905 ರಿಂದ 1908 ರಲ್ಲಿ ಭಾರತದಲ್ಲಿ ನಡೆಸಲಾದ ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿಯನ್ನು ಉಲ್ಲೇಖಿಸುತ್ತದೆ. ಇದು ಬಂಗಾಳದ ಬ್ರಿಟಿಷ್ ವಿಭಜನೆಗೆ ಪ್ರತಿಕ್ರಿಯೆಯಾಗಿ ಈ ಚಳುವಳಿಯನ್ನು ಪ್ರಾರಂಭಿಸಲಾಯಿತು. ಇದು ಒಂದು ಪ್ರಮುಖ ರಾಜಕೀಯ ಪ್ರತಿಭಟನೆಯಾಗಿದ್ದು, ಭಾರತೀಯರು ಬಟ್ಟೆ ಮತ್ತು ಉಪ್ಪಿನಂತಹ ಬ್ರಿಟಿಷ್ ಸರಕುಗಳನ್ನು ತಿರಸ್ಕರಿಸಿ ಸ್ವದೇಶಿ ಉತ್ಪನ್ನಗಳ ಬಳಸುವಂತೆ ಆಂದೋಲನ ನಡೆಸಿದರು. (ಏಜೆನ್ಸೀಸ್)