ಇಂದೋರ್: ಯುವಕರ ಜತೆ ಮಾತನಾಡುತ್ತಿದ್ದಕ್ಕೆ ಆಕ್ರೋಶಗೊಂಡು ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ನುಗ್ಗಿ ಯುವತಿಯರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮೌಖಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯ ಪ್ರದೇಶದ ಇಂದೋರ್ನ ಬ್ಯಾಂಕ್ ಮ್ಯಾನೇಜರ್ ಒಬ್ಬರ ವಿರುದ್ಧ ಹಿಂಸೆ ಮತ್ತು ಅಸಭ್ಯ ವರ್ತನೆ ಪ್ರಕರಣದಡಿಯಲ್ಲಿ ಭಾನುವಾರ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಅಮರ್ಜಿತ್ ಸಿಂಗ್(45) ಎಂದು ಗುರುತಿಸಲಾಗಿದೆ. ಈತ ಖಾಸಗಿ ಬ್ಯಾಂಕ್ ಒಂದರ ಉದ್ಯೋಗಿ. ಕಳೆದ ಶುಕ್ರವಾರ ರಾತ್ರಿ ಇಂದೋರ್ನ ಭನ್ವಾರ ಕೌನ್ ಏರಿಯಾದಲ್ಲಿರುವ ಎಂಬಿಯ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ನುಗ್ಗಿ ಮನಬಂದಂತೆ ವರ್ತಿಸಿ, ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಶುಕ್ರವಾರ ಸಂಜೆ ನಮ್ಮ ಕೆಲ ಸ್ನೇಹಿತರು ನಮ್ಮನ್ನು ಭೇಟಿ ಮಾಡಲು ಹಾಸ್ಟೆಲ್ ಹೊರಭಾಗಕ್ಕೆ ಬಂದಿದ್ದರು. ನಾವು ಹಾಸ್ಟೆಲ್ ಗೇಟ್ ಹೊರಗಡೆ ಮಾತನಾಡುತ್ತಾ ನಿಂತಿದ್ದೆವು. ಅಮರ್ಜಿತ್ ಸಿಂಗ್ ನಮ್ಮತ್ತ ಬಂದು ಸ್ನೇಹಿತರ ಮೇಲೆ ದಾಳಿ ಮಾಡಿದರು. ಬಳಿಕ ನಮ್ಮನ್ನೇ ಹಿಂಬಾಲಿಸಿಕೊಂಡು ಹಾಸ್ಟೆಲ್ ಒಳಗಡೆ ಬಂದರು ಎಂದು ಓರ್ವ ಹಾಸ್ಟೆಲ್ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾರೆ.
ಇದೇ ಮೊದಲೇನಲ್ಲಾ. ಸಾಕಷ್ಟು ಬಾರಿ ನಡೆದಿದೆ. ಆತ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದ ಹಾಗೂ ಕಿರುಚಾಡುತ್ತಿದ್ದ. ಆದರೆ, ಈ ಬಾರಿ ನಮ್ಮ ಸ್ನೇಹಿತರು ಅವನ ವಿರುದ್ಧ ಹೋರಾಡಲು ಯತ್ನಿಸಿದೆವು. ಆದರೆ ಆತನ ತಕ್ಷಣ ಕೋಪಗೊಂಡ ಆದರೆ, ನಾವು ಅವನಿಗೆ ಥಳಿಸಿದೆವು. ಅವನು ಕೂಡ ನಮ್ಮ ಮೇಲೆ ಹಲ್ಲೆ ಮಾಡಿದ ಎಂದು ದೂರಿದ್ದಾರೆ.
ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ನೀಲಿ ಬಣ್ಣದ ಟೀಶರ್ಟ್ ಧರಿಸಿರುವ ಆರೋಪಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನು ದಾಳಿ ಬಗ್ಗೆ ಮಾತನಾಡುತ್ತಾ ತಮ್ಮ ಮಗ ಅಮರ್ಜಿತ್ ಸಿಂಗ್ನನ್ನು ಸಮರ್ಥಿಸಿಕೊಂಡ ಆತನ 67 ವರ್ಷದ ತಾಯಿ, ಹಾಸ್ಟೆಲ್ ಗೇಟ್ ಮುಂಭಾಗ ಸ್ನೇಹಿತರೊಂದಿಗೆ ಯುವತಿಯರು ಮಾತನಾಡುವುದನ್ನು ವಿರೋಧಿಸಿದರು. ಅಲ್ಲದೆ, ಸ್ಥಳೀಯರು ಕೂಡ ಈ ಏರಿಯಾದಲ್ಲಿ ಸಾಕಷ್ಟು ಅನಿಯಂತ್ರಿತ ಹಾಸ್ಟೆಲ್‌ಗಳು ಇವೆ ಎಂದು ಆರೋಪಿಸಿದ್ದು, ಯುವತಿಯರು ಸದಾ ಯುವಕರ ಜತೆ ಮಾತನಾಡುತ್ತಾ ನಿಂತಿರುತ್ತಾರೆ ಎಂದು ದೂರಿದ್ದಾರೆ.
ಆರೋಪಿ ಅಮರ್ಜಿತ್ ಸಿಂಗ್ ಹಾಸ್ಟೆಲ್ ಪಕ್ಕದ ನಿವಾಸಿಯಾಗಿದ್ದಾರೆ. ಹಾಸ್ಟೆಲ್ ಹೊರಭಾಗದಲ್ಲಿ ಯುವತಿಯರು ಮತ್ತು ಯುವಕರು ಇರುವುದನ್ನು ವಿರೋಧಿಸಿದ್ದಾರೆ. ಇದು ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿದೆ. ಮಾತಿಗೆ ಮಾತು ಬೆಳೆದು ಸ್ಥಳದಲ್ಲೇ ಗಲಾಟೆ ನಡೆದಿದೆ. ಬಳಿಕ ಹಾಸ್ಟೆಲ್ ಒಳಗೆ ತೆರಳಿ ಯುವತಿಯರ ಮೇಲೆಯೂ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸಂಜಯ್ ಶುಕ್ಲಾ ತಿಳಿಸಿದ್ದಾರೆ. (ಏಜೆನ್ಸೀಸ್)