Madhuri Dixit ಚಿತ್ರ Instagram
Madhuri Dixit: ಬಾಲಿವುಡ್‌ನ ಬೆಡಗಿ ಮಾಧುರಿ ದೀಕ್ಷಿತ್ ಇಂದು ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ, ಇಂದಿಗೂ ತಮ್ಮ ನೈಸರ್ಗಿಕ ಸೌಂದರ್ಯ, ಹೊಳೆಯುವ ಚರ್ಮ ಮತ್ತು ರೇಷ್ಮೆಯಂತಹ ಕೂದಲಿನಿಂದ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ಸಂಕೀರ್ಣ ಸೌಂದರ್ಯ ಚಿಕಿತ್ಸೆಗಳ ಮೊರೆ ಹೋದರೆ, ಮಾಧುರಿ ಅವರು ಮಾತ್ರ ಸರಳತೆ ಮತ್ತು ಸ್ಥಿರತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಆದಾಗ್ಯೂ, ನಟಿ ತಮ್ಮ ಯೂಟ್ಯೂಬ್ ವಿಡಿಯೋಗಳಲ್ಲಿ ಇಂದಿಗೂ ಅವರ ತಾಜಾ ಹೊಳಪನ್ನು ಕಾಪಾಡಿಕೊಳ್ಳಲು ಅವರು ಅನುಸರಿಸುವ ಚರ್ಮದ ಆರೈಕೆ ಮತ್ತು ಕೂದಲು ರಕ್ಷಣೆಯ ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ.
ಆರೋಗ್ಯಕರ ಚರ್ಮ ಒಳಗಿನಿಂದ ಪ್ರಾರಂಭ
ಉತ್ಪನ್ನಗಳು ಅಥವಾ ದಿನಚರಿಗಳ ಬಗ್ಗೆ ಮಾತನಾಡುವ ಮೊದಲು, ಮಾಧುರಿ ದೀಕ್ಷಿತ್ ಆರೋಗ್ಯಕರ ಆಹಾರ ಮತ್ತು ಜಲಸಂಚಯನದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಅವರ ಪ್ರಕಾರ ಚರ್ಮದ ಆರೈಕೆ ಎಂದರೆ ನೀವು ಮುಖಕ್ಕೆ ಏನು ಹಚ್ಚುತ್ತೀರಿ ಎಂಬುದು ಮುಖ್ಯವಲ್ಲ. ಬದಲಿಗೆ ನಿಮ್ಮ ದೇಹಕ್ಕೆ ಏನು ನೀಡುತ್ತೀರೋ ಅದು ಎಂದು ಹೇಳಿದ್ದಾರೆ.
ಮಾಧುರಿ ಅವರ ಬೆಳಗಿನ ಚರ್ಮದ ಆರೈಕೆ ದಿನಚರಿ
1. ಕ್ಲೆನ್ಸರ್ ಬಳಕೆ
ಮಾಧುರಿ ದೀಕ್ಷಿತ್ ತಮ್ಮ ದಿನವನ್ನು ಉತ್ತಮ ಕ್ಲೆನ್ಸರ್‌ನೊಂದಿಗೆ ಪ್ರಾರಂಭಿಸುತ್ತಾರೆ, ಇದು ಮುಖದ ಮೇಲಿರುವ ಧೂಳು, ಬೆವರು ಮತ್ತು ದಿನವಿಡೀ ಸಂಗ್ರಹವಾದ ಕೊಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಆಳವಾಗಿ ಶುಚಿಗೊಳಿಸಿ ನೈಸರ್ಗಿಕ ತಾಜಾತನವನ್ನು ನೀಡಲು ಸಹಾಯ ಮಾಡುತ್ತದೆ.
2. ರೋಸ್ ವಾಟರ್ ಟೋನರ್
ಕ್ಲೆನ್ಸರ್ ಬಳಸಿದ ನಂತರ ನಟಿ ರೋಸ್ ಟೋನರ್ ಬಳಸುವುದಾಗಿ ಹೇಳುತ್ತಾರೆ. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಚರ್ಮದ pH ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜೊತೆಗೆ ಉರಿಯೂತದಿಂದ ಕೆಂಪಾದ ಚರ್ಮವನ್ನು ಶಾಂತಗೊಳಿಸಲು ಅತ್ಯುತ್ತಮ ಎಂದು ಹೇಳುತ್ತಾರೆ.
3. ವಿಟಮಿನ್ ಸಿ ಸೀರಮ್
ಇದಾದ ಬಳಿಕ ಅವರು ಬಳಸುವುದೇ ವಿಟಮಿನ್ ಸಿ ಸಿರಮ್. ಇದು ಅವರು ತಮ್ಮ ಚರ್ಮದ ಆರೈಕೆಯ ದಿನಚರಿಯ ಭಾಗವಾಗಿ ನಿಯಮಿತವಾಗಿ ಹಚ್ಚುತ್ತಾರೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ, ಮುಖಕ್ಕೆ ತಾಜಾ ಮತ್ತು ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದಲ್ಲಿ ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸಿ, ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಕಡಿಮೆಯಾಗುವಂತೆ ನೋಡಿಕೊಳ್ಳುತ್ತವೆ.
4. ಚರ್ಮದ ಪ್ರಕಾರವನ್ನು ಆಧರಿಸಿದ ಮಾಯಿಶ್ಚರೈಸರ್
ನಿಮ್ಮ ಚರ್ಮದ ಪ್ರಕಾರವನ್ನು ಅವಲಂಬಿಸಿ ಮಾಯಿಶ್ಚರೈಸರ್ ಬಳಸಬೇಕೆಂದು ಮಾಧುರಿ ಹೇಳುತ್ತಾರೆ. ನಿಮ್ಮ ಚರ್ಮವೇನಾದರೂ ಎಣ್ಣೆಯುಕ್ತವಾಗಿದ್ದರೆ ನೀರು ಆಧಾರಿತ ಮಾಯಿಶ್ಚರೈಸರ್ ಬಳಸಬೇಕು. ನಿಮ್ಮ ಚರ್ಮ ಒಣಗಿದ್ದರೆ ದಪ್ಪವಾದ ಕೆನೆ ಬಣ್ಣದ ಮಾಯಿಶ್ಚರೈಸರ್ ಬಳಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
5. ಸನ್‌ಸ್ಕ್ರೀನ್ ಕಡ್ಡಾಯ
ಚರ್ಮವನ್ನು ರಕ್ಷಿಸಿಕೊಳ್ಳಲು ಸನ್ಸ್ಕ್ರೀಮ್ ಕಡ್ಡಾಯ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಉತ್ತಮ ಸನ್ಸ್ಕ್ರೀಮ್ ಸೂರ್ಯನ ಹಾನಿಕಾರಕ ಅಲ್ಟ್ರಾವೈಲೆಟ್ (UV) ಕಿರಣಗಳು ಚರ್ಮದ ಮೇಲೆ ನೇರವಾಗಿ ಬೀರದಂತೆ ತಡೆಯಲು ಸಹಾಯ ಮಾಡುತ್ತದೆ. ಇದರ ಬಳಕೆಯು ಸುಕ್ಕುಗಳು, ಸೂಕ್ಷ್ಮ ರೇಖೆಗಳು ಮತ್ತು ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.