ಸೊರಬ ತಾಲೂಕಿನ ಕುಪ್ಪಗಡ್ಡೆ ಬಳಿ ಗಾಯಾಳುಗಳನ್ನು ಸಚಿವ ಮಧು ಬಂಗಾರಪ್ಪ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿದರು. 
ನ್ಯೂಸ್

ಗಾಯಾಳುಗಳಿಗೆ ಮಧು ಬಂಗಾರಪ್ಪ ನೆರವು

ಶಿವಮೊಗ್ಗ: ಹೊಸನಗರದಲ್ಲಿ ಸೋಮವಾರ ನಿಗದಿಯಾಗಿದ್ದ ಜನಸ್ಪಂದನ ಸಭೆಗೆ ತೆರಳುವಾಗ ಮಾರ್ಗಮಧ್ಯೆ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಬೈಕ್ ಸವಾರರನ್ನು ಸಚಿವ ಮಧು ಬಂಗಾರಪ್ಪ ಅವರು ತಮ್ಮದೇ ವಾಹನದಲ್ಲಿ ಕರೆದೋಯ್ದು ಆಸ್ಪತ್ರೆಗೆ ದಾಖಲಿಸುವ ಜತೆಗೆ ಧನಸಹಾಯ ಮಾಡಿದರು.

ಸೊರಬ ತಾಲೂಕಿನ ಕುಪ್ಪಗಡ್ಡೆ ಬಳಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಉಂಟಾಗಿತ್ತು. ಬೈಕ್ ಸವಾರರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವ ಮಧು ಬಂಗಾರಪ್ಪ, ಕಾರು ನಿಲ್ಲಿಸಿ ಗಾಯಾಳುಗಳನ್ನು ತಕ್ಷಣ ಅವರ ಕಾರಿನಲ್ಲಿ ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಡಿಕ್ಕಿ ಹೊಡೆದು ಪರಾರಿಯಾದ ಕಾರಿನ ಚಾಲಕನ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.