ನ್ಯೂಸ್

ಮೈಕ್ರೋಸಾಫ್ಟ್​ಗೆ ಪ್ರತಿಯಾಗಿ ಬರಲಿದೆ ಮ್ಯಾಕ್ರೋಹಾರ್ಡ್

ಸುದೀಪ್​ ವಿ.ಎನ್​

ನವದೆಹಲಿ: ಮೈಕ್ರೋಸಾಫ್ಟ್​ನ ಸಾಫ್ಟ್​ವೇರ್ ವ್ಯವಹಾರಕ್ಕೆ ಸವಾಲು ಒಡ್ಡಲು ‘ಮ್ಯಾಕ್ರೋಹಾರ್ಡ್’ ಎಂಬ ಹೊಸ ಕಂಪನಿ ಸ್ಥಾಪಿಸುವುದಾಗಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಶುಕ್ರವಾರ ಘೊಷಿಸಿದ್ದಾರೆ. ‘ಇದು ಮೇಲ್ನೋಟಕ್ಕೆ ತಮಾಷೆಯ ಹೆಸರು ಎನಿಸಿದರೂ ಯೋಜನೆ ನಿಜ. ಇದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಸುವಂಥದ್ದು.

ಮೈಕ್ರೋಸಾಫ್ಟ್ ನಂತಹ ಸಾಫ್ಟ್​ವೇರ್ ಕಂಪನಿಗಳು ಯಾವುದೇ ಭೌತಿಕ ಹಾರ್ಡ್​ವೇರ್ ತಯಾರಿಸುವುದಿಲ್ಲ. ಹಾಗಾಗಿ ಎಐ ಮೂಲಕ ಅವುಗಳನ್ನು ಸಂಪೂರ್ಣವಾಗಿ ಅನುಕರಿಸಬಹುದು ಎಂದು ಅವರು ‘ಎಕ್ಸ್’ನಲ್ಲಿ ಮಸ್ಕ್ ತಿಳಿಸಿದ್ದಾರೆ. ಅಮೆರಿಕದ ಪೇಟೆಂಟ್ ಮತ್ತು ಟ್ರೇಡ್​ವಾರ್ಕ್ ಕಚೇರಿಯಲ್ಲಿ ‘ಮ್ಯಾಕ್ರೋಹಾರ್ಡ್’ ಎಂಬ ಹೆಸರಿನ ಪೇಟೆಂಟ್​ಗಾಗಿ ಮಸ್ಕ್ ಅವರ ಎಕ್ಸ್​ಎಐ ಕಂಪನಿ ಆ. 1ರಂದು ಅರ್ಜಿ ಸಲ್ಲಿಸಿದೆ. ನೂರಾರು ವಿಶೇಷ ಕೋಡಿಂಗ್ ಮತ್ತು ಜನರೇಟಿವ್ ಎಐ ಏಜೆಂಟ್​ಗಳನ್ನು ರೂಪಿಸುವುದು ಮ್ಯಾಕ್ರೋಹಾರ್ಡ್​ನ ಗುರಿ. ಇದಕ್ಕಾಗಿ ಅದು ಸೂಪರ್​ಕಂಪ್ಯೂಟರ್​ಗಳನ್ನು ಬಳಸಿಕೊಳ್ಳಲಿದೆ.