ಬೆಂಗಳೂರು: ಚಂದ್ರ ಗ್ರಹಣ ನಾಳೆ ನಡೆಯಲಿದ್ದು, ಜಗತ್ತಿನ ಖಗೋಳ ಆಸಕ್ತರು, ವಿದ್ಯಾರ್ಥಿಗಳ ಆಸಕ್ತಿಯನ್ನು ಇದು ಕೆರಳಿಸಿದೆ. ನಾಳೆ ರಾತ್ರಿ 11.15ಕ್ಕೆ ಆರಂಭವಾಗಲಿರುವ ಗ್ರಹಣ ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. ಅಂದರೆ ಈ ಗ್ರಹಣದ ಒಟ್ಟು ಅವಧಿ ಮೂರು ಗಂಟೆ 19 ನಿಮಿಷ. ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕದ ಕೆಲ ಭಾಗಗಳಲ್ಲಿ ಇದು ಗೋಚರಿಸಲಿದೆ. 12.54ಕ್ಕೆ ಅದು ತನ್ನ ಪೂರ್ಣ ಸ್ವರೂಪದಲ್ಲಿ ಗೋಚರಿಸುತ್ತದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್ ಇಡುವ ತನಕ…
ಈ ನಡುವೆ, ಭಾರತದಲ್ಲಿ ಈ ಸುದ್ದಿ ವ್ಯಾಪಕವಾಗಿರುವ ಕಾರಣ, ಧಾರ್ಮಿಕ ಆಚರಣೆಯ ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿದೆ. ಹೀಗಾಗಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದರ ಕುರಿತ ಧಾರ್ಮಿಕ ಆಚರಣೆ ಕುರಿತು ಹಿರಿಯ ಜ್ಯೋತಿಷಿ ದೈವಜ್ಞ ಸೋಮಯಾಜಿ ಅವರು ದಿಗ್ವಿಜಯ 24X7 ನ್ಯೂಸ್ ಜತೆಗೆ ವೀಕ್ಷಕರ ತಿಳಿವಳಿಕೆಗಾಗಿ ಒಂದಷ್ಟು ಮಾಹಿತಿಯನ್ನು ಒದಗಿಸಿದ್ದಾರೆ. ಅವರ ಮಾತುಗಳ ಪೂರ್ಣಪಾಠ ವೀಕ್ಷಿಸುವುದಕ್ಕೆ ಮೇಲಿನ ಯೂಟ್ಯೂಬ್ ಲಿಂಕ್ ಅನ್ನು ಗಮನಿಸಿ..