ನ್ಯೂಸ್

VIDEO| ಚಿಕನ್‌ ಸಾಂಬಾರ್‌ನಲ್ಲಿ ಸತ್ತ ಇಲಿ..

ಪಂಜಾಬ್‌: ಲುಧಿಯಾನದ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಬಡಿಸಿದ ಭಕ್ಷ್ಯದಲ್ಲಿ ಸತ್ತ ಇಲಿ ಕಂಡುಬಂದಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕಾಶ್‌ ಡಾಬಾದಲ್ಲಿ ಕುಟುಂಬವೊಂದು ಚಿಕನ್‌ ಸಾಂಬಾರ್‌ ಆರ್ಡರ್‌ ಮಾಡಿತ್ತು. ಆದರೆ, ಗ್ರಾಹಕನಿಗೆ ತಂದುಕೊಟ್ಟ ಸಾಂಬಾರ್‌ನಲ್ಲಿ ಕೋಳಿ ಮಾಂಸದ ಬದಲು ಸತ್ತ ಇಲಿ ಮಾಂಸವನ್ನು ಹಾಕಿ ಗ್ರಾಹಕನಿಗೆ ನೀಡಲಾಗಿದೆ. ಸತ್ತ ಪ್ರಾಣಿಯನ್ನು ತನಗೆ ತಿನ್ನಲು ನೀಡಲಾಗಿದೆ ಎಂದು ಗ್ರಾಹಕ ರೆಸ್ಟೋರೆಂಟ್‌ ಮಾಲೀಕನೊಂದಿಗೆ ವಾಗ್ವಾದ ನಡೆಸಿದ್ದಾರೆ.

ಊಟದ ಮೇಜಿನ ಮೇಲೆ ಇಡಲಾಗಿರುವ ವಿವಿಧ ಆಹಾರದಿಂದ ಚಮಚದಿಂದ ಅದರಲ್ಲಿದ್ದ ಮಾಂಸವನ್ನ ತೆಗೆಯುವ ಸಂದರ್ಭದಲ್ಲಿ ಸತ್ತ ಇಲಿಯನ್ನು ಚಮಚದಿಂದ ಎತ್ತಿರುವುದು ಕಾಣುತ್ತದೆ. ಕೇವಲ 31 ಸೆಕೆಂಡ್‌ನ ವಿಡಿಯೋ ಇದಾಗಿತ್ತು. ಇಲಿಯ ಬಾಲ ಕೂಡ ಚಿಕನ್‌ ಸಾಂಬಾರ್‌ನಲ್ಲಿ ಕಂಡಿದೆ. ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಲಾಗಿದೆ.

ಡಾಬಾದ ಮಾಲೀಕರು ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ನಮ್ಮ ರೆಸ್ಟೋರೆಂಟ್‌ನ ಮೌಲ್ಯವನ್ನು ಹಾಳು ಮಾಡಲು ಗ್ರಾಹಕರು ಇಂಥ ವಿಡಿಯೋಗಳನ್ನು ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.