ನ್ಯೂಸ್

ನೀಟ್‌ನಲ್ಲಿ ಅಂಕ ಕಡಿಮೆ ಬಂದಿದ್ದಕ್ಕೆ ನೊಂದು ನದಿಗೆ ಹಾರಿದ ವಿದ್ಯಾರ್ಥಿ

ಕುಂದಾಪುರ: ನೀಟ್‌ನಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಎನ್ನುವ ಕಾರಣಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಗುರುವಾರ ಹಾಲಾಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಂದಾಪುರ ವಿಠಲವಾಡಿ ರಘುವೀರ್ ಶೆಟ್ಟಿ ಎಂಬುವರ ಪುತ್ರ ಶಾಯೀಸ್‌ಶೆಟ್ಟಿ ಮೃತ ವಿದ್ಯಾರ್ಥಿ.

ಶಿವಮೊಗ್ಗ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾಯೀಸ್ ನೀಟ್ ಪರೀಕ್ಷೆ ಬರೆದಿದ್ದು, 630 ಅಂಕ ನಿರೀಕ್ಷಿಸಿದ್ದ. ಗುರುವಾರ ಫಲಿತಾಂಶ ಪ್ರಕಟವಾಗಿದ್ದು, ಸೈಬರ್‌ಗೆ ಸೈಕಲ್‌ನಲ್ಲಿ ತೆರಳಿ ಫಲಿತಾಂಶ ವೀಕ್ಷಿಸಿದ್ದಾನೆ.

ಅದರಲ್ಲಿ ನಿರೀಕ್ಷಿತ ಅಂಕ ಬರದ್ದರಿಂದ ನಿರಾಸೆಗೊಂಡ ಆತ ಸಂಗಮ ಹತ್ತಿರ ಸೇತುವೆ ಮೇಲೆ ಸೈಕಲ್ ಹಾಗೂ ಮೊಬೈಲ್ ಇಟ್ಟು ನೀರಿಗೆ ಜಿಗಿದಿದ್ದಾನೆ. ಆತನಿಗಾಗಿ ಶೋಧ ಮುಂದುವರಿದಿದೆ.