ಶಿವಮೊಗ್ಗ ಎಸ್ಪಿ ಕಚೇರಿ 
ನ್ಯೂಸ್

ರಕ್ಷಣೆಗೆ ಎಸ್ಪಿ ಮೊರೆ ಹೋದ ಪ್ರೇಮಿಗಳು

ಶಿವಮೊಗ್ಗ: ಪ್ರೀತಿಸಿ ಎರಡು ತಿಂಗಳ ಹಿಂದೆ ಮದುವೆಯಾಗಿ ತಮಿಳುನಾಡು ಸೇರಿದ್ದ ಪ್ರೇಮಿಗಳು ಇದೀಗ ರಕ್ಷಣೆ ನೀಡುವಂತೆ ಎಸ್ಪಿ ಮೊರೆ ಹೋಗಿದ್ದಾರೆ.

ಶಿವಮೊಗ್ಗ ವಿನೋಬನಗರ ಕಾಶಿಪುರದ ಜೋಡಿಗೆ ಯುವತಿಯ ಪಾಲಕರು, ಸಂಬಂಧಿಕರಿಂದ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ. ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯು ಕಳೆದ ಆಗಸ್ಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ದರು. ಸ್ಥಳೀಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಅಲ್ಲಿಗೂ ಯುವತಿ ಮನೆಯವರು ಬಂದು ಬೆದರಿಕೆ ಹಾಕುತ್ತಿದ್ದರು.
ಪೊಲೀಸರ ಮೂಲಕವೇ ಬೆದರಿಕೆವೊಡ್ಡಿದ್ದರಿಂದ ಆತಂಕಗೊಂಡ ಜೋಡಿ ಬೆಂಗಳೂರು ಮಾರ್ಗವಾಗಿ ಶುಕ್ರವಾರ ಶಿವಮೊಗ್ಗಕ್ಕೆ ಬಂದಿದ್ದು ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಎಸ್ಪಿ ಕಚೇರಿಗೆ ತೆರಳಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರನ್ನು ಭೇಟಿ ಮಾಡಿ ರಕ್ಷಣೆ ಕೋರಿತು.