Rajasthan : ಮೂರು ವರ್ಷದ ಮಗುವನ್ನು ಆಕೆಯ ತಾಯಿ ಸರೋವರದ ಬಳಿ ಕರೆದುಕೊಂಡು ಹೋಗಿ ನೀರಿನೊಳಗೆ ತಳ್ಳಿ ಹತ್ಯೆಗೈದಿರುವ ಘಟನೆ (ಸೆಪ್ಟೆಂಬರ್ 17)ರಾಜಸ್ಥಾನದ ಅಜ್ಮೀರ್ನಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಆರೋಪಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದವಳಾಗಿದ್ದು, ಪತಿಯಿಂದ ಬೇರ್ಪಟ್ಟ ನಂತರ, ಅಜ್ಮೀರ್ನ ದತನಗರದಲ್ಲಿ ಅಕ್ಲೇಷ್ ಗುಪ್ತಾನೊಂದಿಗೆ ಲೀವ್ ಇನ್ ಸಂಬಂಧ ಹೊಂದಿದ್ದಳು. ಆದರೆ, ಈತನಿಗೆ ಇವಳ ಮಗುವಿನ ಮೇಲೆ ಆಸೆ ಇಲ್ಲದ ಕಾರಣ ಮಹಿಳೆಯು ಈ ಕೃತ್ಯ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತ ಮಾತೆ ಸೇವೆಗೆ ಅರ್ಪಿಸಿಕೊಂಡು ದುಡಿಯುತ್ತಿರುವ ಮೋದಿ
ಪೊಲೀಸ್ ಅಧಿಕಾರಿ ರುದ್ರಪ್ರಕಾಶ್ ಶರ್ಮಾ ಅವರು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಜರಂಗ್ ಘರ್ ಛೇದಕ ಬಳಿ ಅಂಜಲಿ ಮತ್ತು ಅಕ್ಲೇಶ್ ಅವರನ್ನು ನೋಡಿದಾಗ ಅವರಿಬ್ಬರನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಲೆ ಮಹಿಳೆಯು ತನ್ನ ಮಗಳು ಕಾಣೆಯಾಗಿದ್ದಾಳೆ. ಅವಳನ್ನು ಹುಡುಕುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಾಳೆ.
ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು, ಆ ಪ್ರದೇಶದ ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದಾಗ ಬೆಳಗಿನ ಜಾವ ಸುಮಾರು 1:30 ಸಮಯದ ನಡುವೆ ಮಗು ಅಂಜಲಿ ಜೊತೆ ಇರುವುದು ಕಂಡುಬಂದಿದೆ. ಹೆಚ್ಚಿನ ದೃಶ್ಯಗಳಲ್ಲಿ ಆಕೆಯು ಮಗಳನ್ನು ಸರೋವರದ ಬಳಿ ಇರುವ ಮೇಜಿನ ಮೇಲೆ ಮಲಗಿಸಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ಅಮಾವಾಸ್ಯೆಯಂದೇ ಸಂಭವಿಸಲಿದೆ ಸೂರ್ಯಗ್ರಹಣ; ಪೂರ್ವಜರಿಗೆ ಸಲ್ಲಿಸುವ ಪೂಜೆಯಲ್ಲಿ ಬದಲಾವಣೆಯಾಗುತ್ತಾ| solar eclipse
ಇದಾದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಅಂಜಲಿ ತನ್ನ ಮಗಳನ್ನುಆತನ ಪ್ರಿಯಕರ ಒಪ್ಪದಿದ್ದಕ್ಕೆ ಸರೋವರಕ್ಕೆ ತಳ್ಳಿದ್ದಾಗಿ ಹೇಳಿದ್ದಾಳೆ. ನಂತರ, ಪೊಲೀಸರು ಅನಾ ಸಾಗರ್ ಸರೋವರದಿಂದ ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)