ಲವ್ ಸೀಸನ್ಸ್​ 
ನ್ಯೂಸ್

Love Seasons - ಮಳೆಯಾಗೋ ಮೊದಲೇ ರೊಮ್ಯಾಂಟಿಕ್​ ಲವ್​ ಸೀಸನ್​

Love Seasons -
ಕೃತ್ವಿಕ್​ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳಿರುವ ಸಿನಿಮಾ "ಲವ್​ ಸೀಸನ್ಸ್​'. ಹೆಸರೇ ಹೇಳುವಂತೆ ಇದೊಂದು ರೊಮ್ಯಾಂಟಿಕ್​ ಲವ್​ಸ್ಟೋರಿಯಾಗಿದ್ದು, ಅದನ್ನು ವಿಭಿನ್ನವಾಗಿ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕೃತ್ವಿಕ್​. ಈಗಾಗಲೇ ಫಸ್ಟ್​ ಲುಕ್​ ಮತ್ತು ಟೀಸರ್​ ಬಿಡುಗಡೆ ಮಾಡಿದ್ದ ಚಿತ್ರತಂಡ ಇತ್ತೀಚೆಗಷ್ಟೆ ಮೊದಲ ಲಿರಿಕಲ್​ ವಿಡಿಯೋ ಸಾಂಗ್​ ರಿಲೀಸ್​ ಮಾಡಿದೆ. "ಮಳೆಯಾಗೋ ಮೊದಲೇ ಕೊಡೆ ಹಿಡಿದು ಬರುವೆ, ನಗು ಮುಗಿವಾ ಮೊದಲೇ ಹೊಸ ಖುಷಿಯ ಕೊಡುವೆ' ಎಂದು ಸಾಗುವ ಈ ಹಾಡಿಗೆ "ಕಾಂತಾರ' ಚಿತ್ರದ "ಸಿಂಗಾರಿ ಸಿರಿಯೇ' ಖ್ಯಾತಿಯ ಪ್ರಮೋದ್​ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ವೀರ್​ ಸಮರ್ಥ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿವೆ. ಈ ಹಾಡಿಗೆ ಬಾಲಿವುಡ್​ ಗಾಯಕ ಅರ್ಮಾನ್​ ಮಲ್ಲಿಕ್​ ಮತ್ತು "ಸರಿಗಮಪ' ಸೀಸನ್​ 10ರ ಸ್ಪರ್ಧಿಯಾಗಿದ್ದ ಪ್ರಜ್ಞಾ ಮರಾಠೆ ಧ್ವನಿಯಾಗಿದ್ದಾರೆ. "ಲವ್​ ಸೀಸನ್ಸ್​' ಮೂಲಕ ಮುಕುಂದ ರಾಮಸ್ವಾಮಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಮೂವರು ನಾಯಕಿಯರಿದ್ದು ದಿಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೊಗ್ಲೂರು ನಟಿಸಿದ್ದಾರೆ. ಉಳಿದಂತೆ ಮಂಡ್ಯ ರಮೇಶ್​, ರಾಜೇಶ್​ ನಟರಂಗ, ಸಂಗೀತಾ ಅನಿಲ್​, ಜಯತೀರ್ಥ, ಚೇತನ್​ ದುರ್ಗ, ಸದಾನಂದ್​, ಹುಲಿ ಕಾರ್ತಿಕ್​, ಬೇಬಿ ರಿತು ತಾರಾಗಣದಲ್ಲಿದ್ದಾರೆ.