ನ್ಯೂಸ್

ಪ್ರೀತಿ ಯಾವತ್ತೂ ಹಿಟ್ ಅಂಡ್ ರನ್ ಆಗದಿರಲಿ: ಸಂತೋಷ್ ಹೆಗ್ಡೆ

ಬೆಂಗಳೂರು: ಫೆಬ್ರವರಿ 14 ಪ್ರಪಂಚದಾದ್ಯಂತ ಅನೇಕರು ತಮ್ಮ ಪಾರ್ಟನರ್‌ನೊಂದಿಗೆ ಪ್ರೀತಿ ಮತ್ತು ಒಡನಾಟವನ್ನು ಆಚರಿಸಲು ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರೀತಿಸುವ ಮನಸುಗಳಿಗೆ ಇದು ಸಕತ್‌ ಸ್ಪೆಷಲ್‌ ಡೇ. ಪ್ರೇಮಿಗಳ ದಿನಾಚರಣೆ ಆಚರಿಸುವ ಯುವಕರಿಗೆ ಒಂದು ಸಂದೇಶ ರವಾನಿಸಿದ್ದಾರೆ.

ಈ ವಿಶೇಷ ದಿನಂದಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಮ್ಮ ಪ್ರೀತಿಯ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದ್ದಾರೆ. ನಾನೂ ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂತೋಷ್ ಹೆಗ್ಡೆ ಅವರು, ನಾನೂ ಕೂಡ ಪ್ರೀತಿಸಿ ಮದುವೆ ಆಗಿದ್ದೇನೆ. 54 ವರ್ಷವಾಯ್ತು. ಇನ್ನೂ ಜೊತೆಯಲ್ಲೇ ಇದ್ದೇವೆ. ಡಿವೋರ್ಸ್​ ಆಗಿಲ್ಲ. ಇನ್ನು ಮುಂದೆ ಡಿವೋರ್ಸ್​ ಆಗುವ ಚಾನ್ಸ್ ಕೂಡ ಇಲ್ಲ ಹೇಳಿದರು.

ಪ್ರೀತಿ ಯಾವತ್ತೂ ಹಿಟ್ ಅಂಡ್ ರನ್ ಆಗಬಾರದು. ಪ್ರೀತಿಸಿ ಮದುವೆ ಆದವರು ಎಂದಿಗೂ ವಿಚ್ಛೇದನಾ ಕೇಳಬಾರದು. ಸಾಯೋವರೆಗೂ ಜೊತೆಯಲ್ಲಿ ಇರಬೇಕು ಅದಕ್ಕೊಂದು ಕಾನೂನು ಮಾಡಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಲಹೆ ನೀಡಿದರು.