ನ್ಯೂಸ್

ಮನಸಾರೆ ಪ್ರೀತಿಸಿದ್ದ ಹುಡುಗಿಗೆ ಬೇರೊಬ್ಬನೊಂದಿಗೆ ನಿಶ್ಚಿತಾರ್ಥವಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ; ಡೆತ್​ನೋಟ್​ನಲ್ಲಿ ಪ್ರೇಯಸಿಯ ಹೆಸರು...

lakshmihegde

ಮಂಡ್ಯ: ಪ್ರೀತಿಸಿದ ಹುಡುಗಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದರ್ಶನ್​ ಮೃತ ಯುವಕ. ಈತ ಬೆಂಗಳೂರಿನಲ್ಲಿ ಇದ್ದ. ಆದರೆ ಗ್ರಾಮದ ಯುವತಿಯೋರ್ವಳನ್ನು ಚಿಕ್ಕಂದಿನಿಂದಲೂ ಪ್ರೀತಿ ಮಾಡುತ್ತಿದ್ದ. ಆದರೆ ಈ ಯುವತಿಗೆ ಬೇರೊಬ್ಬನೊಂದಿಗೆ ಮನೆಯವರು ನಿಶ್ಚಿತಾರ್ಥ ಆಗಿತ್ತು. ಇದರಿಂದ ಮನನೊಂದಿದ್ದ. ನೀನು ನಿಶ್ಚಿತಾರ್ಥಕ್ಕೆ ಹೋಗಿದ್ದೆಯಾ ಎಂದು ತನ್ನ ಅಮ್ಮನಿಗೂ ಫೋನ್​ ಮಾಡಿ ಕೇಳಿದ್ದ ಎನ್ನಲಾಗಿದೆ.

ಇವರಿಬ್ಬರ ಪ್ರೀತಿ ವಿಚಾರ ಎರಡೂ ಕುಟುಂಬಕ್ಕೆ ಗೊತ್ತಿತ್ತು. ಹುಡುಗಿಯ ನಿಶ್ಚಿತಾರ್ಥ ನಡೆದ ಮೇಲೆ ಆಕೆಯ ತಂಟೆಗೆ ಬರದಂತೆ ಯುವಕನಿಗೆ ಆಕೆಯ ಪಾಲಕರು ಬೆದರಿಕೆ ಹಾಕಿದ್ದರು. ಇದೆಲ್ಲದರಿಂದ ಮನನೊಂದು ಬೆಂಗಳೂರಿನ ಕೊಠಡಿಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನನ್ನ ಸಾವಿಗೆ ನೀನೇ ಕಾರಣ ಎಂದು ಪ್ರಿಯತಮೆಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದರ್ಶನ್​ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.