ನ್ಯೂಸ್

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಗ್ಯಾಂಗ್

ಭೋಪಾಲ್: ಹಿಂದು ಹುಡುಗಿಯರು ಹಾಗೂ ಮಹಿಳೆಯರ ಗೆಳೆತನ ಬೆಳೆಸಿ ಅತ್ಯಾಚಾರವೆಸಗಿ ಅವುಗಳ ವಿಡಿಯೋ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲಾ್ಯಕ್​ವೆುೕಲ್ ಮಾಡಿ ಮತಾಂತರಕ್ಕೆ ಬಲವಂತಪಡಿಸುವ ‘ಲವ್ ಜಿಹಾದ್ ಗ್ಯಾಂಗ್’ ಗಳು ಮಧ್ಯಪ್ರದೇಶ ರಾಜಧಾನಿ ಭೋಪಾಲ್ ಮತ್ತು ಇತರ ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಒಬ್ಬ ಮಹಿಳಾ ಸಬ್​ಇನ್ಸ್​ಪೆಕ್ಟರ್ ಕೂಡ ಈ ಜಾಲದ ಕುಕೃತ್ಯಕ್ಕೆ ಒಳಗಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ತಿಂಗಳು ಇಂಥ ಅನೇಕ ಪ್ರಕರಣಗಳು ನಡೆದಿದ್ದು ಹಲವಾರು ನಗರಗಳಲ್ಲಿ 12ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ಪತಿಯಿಂದ ವಿಚ್ಛೇದನ ಪಡೆದು 14 ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ನೆಲೆಸಿರುವ 35ರ ಹರೆಯದ ಮಹಿಳೆ ಲವ್ ಜಿಹಾದ್ ಜಾಲಕ್ಕೆ ಬಲಿಯಾಗಿರುವ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ನದೀಮ್ ಎಂಬಾತ ತನ್ನೊಂದಿಗೆ ಗೆಳೆತನ ಬೆಳೆಸಿ ಮದುವೆಯಾಗುವ ಆಮಿಷವೊಡ್ಡಿ ಅನೇಕ ಸಲ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಇಸ್ಲಾಂಗೆ ಮತಾಂತರಗೊಂಡರೆ ಹಾಗೂ ಮಗ ಮುಸ್ಲಿಂ ಸಂಪ್ರದಾಯದಂತೆ ಸುನ್ನತಿಗೆ ಒಳಗಾದರೆ ಮಾತ್ರವೇ ಮದುವೆಯಾಗುವುದಾಗಿ ನದೀಂ ನಂತರ ಷರತ್ತುಗಳನ್ನು ಹಾಕಿದ ಎಂದು ಮಹಿಳೆ ವಿವರಿಸಿದ್ದಾಳೆ. 12 ವರ್ಷದ ಹಿಂದೆ ವಿಚ್ಛೇದನವಾಗಿದ್ದ ಮಹಿಳೆಗೆ ಮೂರು ವರ್ಷದ ಕೆಳಗಡೆ ನದೀಂ ಪರಿಚಯವಾಗಿದ್ದ. ಆರಂಭದಲ್ಲಿ ಆಕೆಗೆ ಬೆಂಬಲವಾಗಿದ್ದ ನದೀಂ ಆಗಾಗ ಮನೆಗೂ ಬರಲಾರಂಭಿಸಿದ್ದ. ಇಬ್ಬರ ನಡುವೆ ಲೈಂಗಿಕ ಸಂಬಂಧವೂ ಬೆಳೆದಿತ್ತು. ಆದರೆ, ನದೀಂ ಅದಾಗಲೇ ಮದುವೆಯಾಗಿದ್ದ ವಿಚಾರ ಮಹಿಳೆಗೆ ತಡವಾಗಿ ಗೊತ್ತಾಗಿದೆ. ಇದೇ ಮೇ 13ರಂದು ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿದ ನದೀಂ, ಆ ದೃಶ್ಯವನ್ನು ಚಿತ್ರೀಕರಿಸಿಕೊಂಡು ಬೆದರಿಕೆ ಹಾಕಲು ಆರಂಭಿಸಿದ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ಬುಝಾ ಧರಿಸಬೇಕು, ಗುರುವಾರದ ಉಪವಾಸ ವೃತ ಮಾಡಬಾರದು ಹಾಗೂ ತನ್ನ ಅನುಮತಿಯಿಲ್ಲದೆ ಮನೆಯಿಂದ ಹೊರಗೆ ಹೋಗಬಾರದೆಂದು ಧಮಕಿ ಹಾಕಲು ಆರಂಭಿಸಿದ್ದಾನೆ ಎಂದು ಆಕೆ ಗೋಳನ್ನು ವಿವರಿಸಿದ್ದಾಳೆ. ಇದಕ್ಕೆಲ್ಲ ಸೊಪ್ಪು ಹಾಕದಿದ್ದಾಗ ನದೀಂ ಕೆಟ್ಟದಗಿ ನಡೆದುಕೊಳ್ಳಲು ಆರಂಭಿಸಿದ್ದರಿಂದ ಪೊಲೀಸರ ಮೊರೆ ಹೋಗಿದ್ದಾಗಿ ತಿಳಿಸಿದ್ದಾಳೆ.

ವಿದ್ಯಾರ್ಥಿನಿಯರೇ ಟಾರ್ಗೆಟ್

ಪರ್ಹಾನ್ ಎಂಬಾತನ ವಿರುದ್ಧ ಯುವತಿಯೊಬ್ಬಳು ದಾಖಲಿಸಿದ ದೂರಿನ ಮೇರೆಗೆ ಕಾರ್ಯಾಚರಿಸಿರುವ ಪೊಲೀಸರು, ಕಾಲೇಜ್​ಗಳ ಹಿಂದು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಒಂದು ಗ್ಯಾಂಗ್​ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರ್ಹಾನ್​ನ ಬಂಧನದ ನಂತರ ಆತನ ಬಳಿಯಿರುವ ಅನೇಕ ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ದೌರ್ಜನ್ಯ ನಡೆಸುತ್ತಿದ್ದ ದೃಶ್ಯಗಳು ಅವುಗಳಲ್ಲಿವೆ.

ಐದು ಸಂತ್ರಸ್ತರ ದೂರು

ಇದುವರೆಗೆ ಐದು ಸಂತ್ರಸ್ತರು ಮಾತ್ರ ದೂರು ಸಲ್ಲಿಸಿದ್ದು ಫರ್ಹಾನ್ ಅಲ್ಲದೆ ಸಾಹಿಲ್, ಅಲಿ, ಸಾದ್ ಮತ್ತು ನಬೀಲ್ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಫರ್ಹಾನ್ ಈ ಗ್ಯಾಂಗ್​ನ ಸೂತ್ರಧಾರ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.