ನ್ಯೂಸ್

ಇದು ಆಟೋ ರಿಕ್ಷಾ ಅಲ್ಲ.. ಹ್ಯಾಂಡ್ ಬ್ಯಾಗ್! ವಿಡಿಯೋ ನೋಡಿ ...Autorickshaw Bag

ನವದೆಹಲಿ: ( Autorickshaw Bag  ) ಮಹಿಳೆಯರು ಹ್ಯಾಂಡ್ ಬ್ಯಾಗ್​​ಗಳನ್ನು ಇಷ್ಟಪಡುತ್ತಾರೆ. ಅನೇಕ ಜನರು ಲಕ್ಷಾಂತರ ರೂಪಾಯಿಗಳನ್ನು ಪಾವತಿಸಿ ಈ ಬ್ರಾಂಡ್ ಚೀಲಗಳನ್ನು ಖರೀದಿಸುವ ಜನರಿದ್ದಾರೆ. ಇಲ್ಲೊಂದು ಆಟೋ ರಿಕ್ಷಾ ಥೀಮ್ ಹ್ಯಾಂಡ್​​ ಬ್ಯಾಗ್​ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಲೂಯಿ ವಿಟಾನ್ ತನ್ನ ವಿಶಿಷ್ಟ ಹ್ಯಾಂಡ್​ ಬ್ಯಾಗ್​​ಗಳಿಗೆ ಹೆಸರುವಾಸಿಯಾಗಿದೆ. ಹಿಂದೆ, ಈ ಬ್ರ್ಯಾಂಡ್ ವಿಶ್ವದ ಅತ್ಯಂತ ಚಿಕ್ಕ ಸೂಕ್ಷ್ಮ ಕೈಚೀಲವನ್ನು ತಯಾರಿಸುವ ಮೂಲಕ ಸುದ್ದಿ ಮಾಡಿತ್ತು. ಈಗ ಎಲ್ವಿ ಭಾರತೀಯ ಆಟೋ ರಿಕ್ಷಾ ಥೀಮ್‌ನೊಂದಿಗೆ ವಿಭಿನ್ನ ಕೈಚೀಲವನ್ನು ಪರಿಚಯಿಸಿದೆ. ನಿಜವಾದ ಆಟೋದಂತೆ ಕಾಣುವ ಈ ಹ್ಯಾಂಡ್​​ ಬ್ಯಾಗ್​ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆಟೋ ರಿಕ್ಷಾ ಥೀಮ್ ಬ್ಯಾಗ್ ಲೂಯಿ ವಿಟಾನ್ ಬ್ರ್ಯಾಂಡ್ ಈ ಹಿಂದೆ ವಿಶ್ವದ ಅತ್ಯಂತ ಚಿಕ್ಕ ಹ್ಯಾಂಡ್‌ಬ್ಯಾಗ್ ತಯಾರಿಸುವ ಮೂಲಕ ಸುದ್ದಿ ಮಾಡಿತ್ತು. ಈಗ, ಐಷಾರಾಮಿ ಕಂಪನಿಯು ಭಾರತೀಯ ಆಟೋ ರಿಕ್ಷಾ ಥೀಮ್ ಬ್ಯಾಗ್ ತಯಾರಿಸುವ ಮೂಲಕ ಸುದ್ದಿ ಮಾಡಿದೆ. ಫ್ಯಾಷನ್ ಮತ್ತು ಸಂಸ್ಕೃತಿಯ ಈ ವಿಶಿಷ್ಟ ಸಂಯೋಜನೆಯು ಫ್ಯಾಷನ್ ಪ್ರಿಯರನ್ನು ಮೆಚ್ಚಿಸುವುದು ಖಚಿತ.

ಲೂಯಿ ವಿಟಾನ್ ವಿನ್ಯಾಸಕರು ಈ ಹೊಸ ಬ್ಯಾಗ್ ಅನ್ನು ಆಟೋ ರಿಕ್ಷಾ ಥೀಮ್‌ನೊಂದಿಗೆ ವಿನ್ಯಾಸಗೊಳಿಸಿದ್ದಾರೆ. ಇದು LV ಯ ಸಿಗ್ನೇಚರ್ ಕ್ಲಾಸಿಕ್ ಬ್ರೌನ್ ಮತ್ತು ಗೋಲ್ಡನ್ ಮೊನೊಗ್ರಾಮ್ ಪ್ರಿಂಟ್ ಅನ್ನು ಒಳಗೊಂಡಿದೆ.

ಈ ವಿಡಿಯೋವನ್ನು diet_paratha ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೂರು ಚಕ್ರಗಳನ್ನು ಹೊಂದಿರುವ ರಿಕ್ಷಾ-ಥೀಮ್ ಹ್ಯಾಂಡ್‌ಬ್ಯಾಗ್ ಅನ್ನು ತೋರಿಸಲಾಗಿದೆ. ಫ್ಯಾಷನ್ ಪ್ರಿಯರು ಈ ವಿಶಿಷ್ಟ ಹ್ಯಾಂಡ್‌ಬ್ಯಾಗ್‌ಗೆ ಸಂಪೂರ್ಣವಾಗಿ ಮಾರುಹೋಗಿದ್ದಾರೆ.