ನ್ಯೂಸ್

ಹಿಂಬದಿಯಿಂದ ಡಿಕ್ಕಿ! ಧಗಧಗನೆ ಹೊತ್ತಿ ಉರಿದ ಲಾರಿ​, ಓರ್ವ ಸಜೀವ ದಹನ

ಮೋಹನ್​ ಶೆಟ್ಟಿ

ಬಾಗಲಕೋಟೆ: ಮುಂದೆ ಹೊರಟಿದ್ದ ಲಾರಿಗೆ ಹಿಂದಿನಿಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಲಾರಿಗಳಿಗೆ ದಿಢೀರ್​ ಬೆಂಕಿ ಹತ್ತಿಕೊಂಡಿದ್ದು, ಹಿಂಬದಿಯಿಂದ ಬಂದ ಲಾರಿಯಲ್ಲಿ ಇದ್ದ ಓರ್ವ ವ್ಯಕ್ತಿ ಸಜೀವ ದಹನ. ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಬೆಳಗಲ್ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದೆ.

ಮುಂದಿನ‌ ಲಾರಿ ನಾಗಾಲ್ಯಾಂಡ್ ರಾಜ್ಯಕ್ಕೆ ಸೇರಿದರೆ ಹಿಂಬದಿ ಲಾರಿ ರಾಜಸ್ತಾನಕ್ಕೆ ಸೇರಿದೆ. ಇಳಕಲ್ ಕಡೆಯಿಂದ ವಿಜಯಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಈ ಅಗ್ನಿ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮೃತ ವ್ಯಕ್ತಿ ಬಗ್ಗೆ ಸದ್ಯದ ಮಟ್ಟಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ಇದೀಗ ಪೊಲೀಸರು ಮುಂದಾಗಿದ್ದಾರೆ.