ವಿಜಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಖಾಸಗಿ ಬಸ್ ಭಸ್ಮವಾದ ಬೆನ್ನಲ್ಲೇ ಇದೀಗ ಲಾರಿ ಕೂಡ ಧಗಧಗನೆ ಹೊತ್ತಿ ಉರಿದಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ಹೇಳುವ ಗಡಿಯಾರ ಉಡುಗೊರೆ ಕೊಟ್ಟ ಲಕ್ನೋ ತರಕಾರಿ ವ್ಯಾಪಾರಿ
ಗೊಳಸಂಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಉಣ್ಣಿಬಾವಿ ಕ್ರಾಸ್ ಹತ್ತಿರ ದಾಬಾವೊಂದರ ಬಳಿ ಹೊತ್ತಿ ಉರಿದ ಲಾರಿ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಡಾಬಾ ಬಳಿ ತಮಿಳುನಾಡು ಮೂಲದ ಲಾರಿ ನಿಲ್ಲಿಸಿ ಅಡುಗೆ ಮಾಡುತ್ತಿರುವಾಗ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಇಡೀ ಲಾರಿ ಸುಟ್ಟು ಕರಕಲಾಗಿದೆ.
ಆಗಸದೆತ್ತರಕ್ಕೆ ಚಿಮ್ಮುತ್ತಿದ್ದ ಬೆಂಕಿ ಕಂಡು ಜನ ಆತಂಕಗೊಂಡಿದ್ದು, ಘಟನೆಯಲ್ಲಿ ಚಾಲಕನಿಗೆ ಕೈ ಕಾಲು ಮತ್ತಿತರ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಈ ಪ್ರಕರಣ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.