ನ್ಯೂಸ್

ಮಾವು ಸಾಗಿಸುತ್ತಿದ್ದ ಲಾರಿ ಪಲ್ಟಿ; 9 ಕಾರ್ಮಿಕರು ದುರ್ಮರಣ: 13 ಜನರಿಗೆ ಗಂಭೀರ ಗಾಯ! | Workers Die

Workers Die: ಮಾವು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆ 9 ಕಾರ್ಮಿಕರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮೃತರಲ್ಲಿ ಐವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಅಪಘಾತದಲ್ಲಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಜ್ಜಲ ದುರ್ಗಯ್ಯ, ಗಜ್ಜಲ ವೆಂಕಟೇಶ, ಗಜ್ಜಲ ಶ್ರೀನು, ಗಜ್ಜಲ ರಮಣ, ಸುಬ್ಬರತ್ನಮ್ಮ, ಚಿಟ್ಟೆಮ್ಮ, ಗಜ್ಜಲ ಲಕ್ಷ್ಮೀದೇವಿ, ರಾಧಾ, ವೆಂಕಟ ಸುಬ್ಬಮ್ಮ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 13 ಮಂದಿ ಕೂಲಿ ಕಾರ್ಮಿಕರನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಟಿಗುಂಟ ಎಸ್‌ಟಿ ಕಾಲೋನಿಯ 22 ಕಾರ್ಮಿಕರು ಮಾವಿನ ಹಣ್ಣುಗಳನ್ನು ಕತ್ತರಿಸಿ ಲಾರಿಗೆ ತುಂಬಿಸಲು ಐಚರ್ ವಾಹನದಲ್ಲಿ ರಾಜಂಪೇಟೆಯ ಇಸುಕುಪಲ್ಲಿ ಗ್ರಾಮಕ್ಕೆ ಹೋಗಿದ್ದರು. ಮಾವಿನ ಹಣ್ಣುಗಳನ್ನು ಲೋಡ್ ಮಾಡಿದ ನಂತರ, ಅವರು ಅದೇ ಲಾರಿಯಲ್ಲಿ ರೈಲ್ವೆ ಕೊಡೂರು ಮಾವಿನ ಮಾರುಕಟ್ಟೆಗೆ ತೆರಳಿದರು. ರೆಡ್ಡಿಪಲ್ಲಿ ಹೊಂಡದ ಕಟ್ಟೆ ಬಳಿ ಬರುತ್ತಿದ್ದ ಲಾರಿ ತಿರುವಿನಲ್ಲಿ ಎದುರಿನ ವಾಹನವನ್ನು ಓವರ್ ಟೇಕ್ ಮಾಡಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.(ಏಜೆನ್ಸೀಸ್​)