Bigg Boss 9 Telugu : ತೆಲುಗಿನ ಬಿಗ್ಬಾಸ್ ಸೀಸನ್ 9 ಸೆಪ್ಟೆಂಬರ್ 7 ರ ಭಾನುವಾರ ಸಂಜೆ 7 ಗಂಟೆಗೆ ಅದ್ದೂರಿಯಾಗಿ ಪ್ರಾರಂಭವಾಯಿತು. ಈ ಬಾರಿ ಒಟ್ಟು 15 ಸ್ಪರ್ಧಿಗಳು ಮನೆ ಪ್ರವೇಶಿಸಿದ್ದು, ತೆಲಗು ಬಿಗ್ಬಾಸ್ ಮೆನೆಗೆ ಕನ್ನಡ ಸೆಲೆಬ್ರಿಟಿಗಳು ಇದ್ದಾರೆ ಎನ್ನುವುದು ವಿಶೇಷವಾಗಿದೆ.
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಅವರು ಡಾರ್ಲಿಂಗ್ ಪ್ರಭಾಸ್ ಅವರ ಬುಜ್ಜಿಗಾಡು ಸಿನಿಮಾದಲ್ಲಿ ನಟಿಸುವ ಮೂಲಕವಾಗಿ ತೆಲಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಇವರು ಈಗ ತೆಲಗು ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ಕನ್ನಡ ಬಿಗ್ಬಾಸ್ ಆರಂಭದ ಸೀಸನ್ನಲ್ಲಿ ಕಾಣಿಸಿಕೊಂಡಿದ್ದರು. ಸಂಜನಾ ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಚಂಡಿಗಂಡದ ನಿವಾಸಿಯಾಗಿರುವ ಫ್ಲೋರಾ ಸೈನಿ 2ನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಪ್ರೇಮ ಕೋಸಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿರುವ ಈ ನಟಿ ಸಾಕಷ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಹಾಗೂ ರವಿಚಂದ್ರನ್ ಅಭಿನಯದ ಕೋದಂಡರಾಮ ಚಿತ್ರದಲ್ಲಿ ಸಂಗೀತಾ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರವಿದ್ದ ನಂತರ, ಅವರು ಈಗ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮರುಪ್ರವೇಶ ಮಾಡಲು ಪ್ರಯತ್ನಿಸುತ್ತಿದ್ದಾರೆ.
ತೆಲಗು ಮತ್ತು ಕನ್ನಡ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಇವರು ಕನ್ನಡದ 6-5=3 ಸಿನಿಮಾ ಮೂಲಕವಾಗಿಯೂ ಸ್ಯಾಂಡಲ್ವುಡ್ಗೆ ಪರಿಚಿತರಾಗಿದ್ದಾರೆ.
ಮುದ್ದ ಮಂದಾರಂ ಧಾರಾವಾಹಿಯ ಮೂಲಕ ಅವರು ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಅವರು ಈ ಹಿಂದೆ ಜತಿರತ್ನಲು ಜೊತೆ ಸ್ಟಾರ್ ಮಾಲೋ ಕುಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.