ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ಹೀರೋ, ನಟ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಪ್ಯಾನ್ ಇಂಡಿಯಾ ಸಿನಿಮಾ 'ಲಿಯೋ' ಕಳೆದ ಅಕ್ಟೋಬರ್ 19 ರಂದು ಜಾಗತಿಕವಾಗಿ ಬಿಡುಗಡೆಗೊಂಡು, ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಈ ಸಿನಿಮಾ ತಂದುಕೊಟ್ಟ ಸಕ್ಸಸ್ ಕುರಿತು ನಿರ್ದೇಶಕ ಲೋಕೇಶ್ ಕನಕರಾಜ್ ಸಿನಿಪ್ರೇಮಿಗಳು ಹಾಗೂ ವಿಜಯ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಈ ಹಿಂದೆ ಎಲ್ಲೂ ಕೂಡ ಲಿಯೋ ಭಾಗ 2ರ ಬಗ್ಗೆ ಮಾಹಿತಿ ನೀಡದ ಲೋಕೇಶ್, ಇದೀಗ ದಳಪತಿ ಫ್ಯಾನ್ಸ್ಗೆ ಸುಳಿವನ್ನು ನೀಡಿದ್ದಾರೆ. ಅಷ್ಟಕ್ಕೂ ಅದೇನು? ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದರ ವಿವರ ಹೀಗಿದೆ.
'ಲಿಯೋ' ಸೇರಿದಂತೆ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ತಲೈವರ್ 171' ಚಿತ್ರವನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿರುವ ಲೋಕೇಶ್ ಕನಕರಾಜ್, ಇತ್ತೀಚಿಗೆ ನಡೆದ ಸಂವಾದದಲ್ಲಿ ವಿಜಯ್ನ ಒಳಗೊಂಡ 'ಲಿಯೋ 2' ಸಿನಿಮಾ ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ದಳಪತಿ ಫ್ಯಾನ್ಸ್ಗೆ ಖಾತ್ರಿ ಪಡಿಸಿದ್ದಾರೆ.
'ಲಿಯೋ 2' ಚಿತ್ರದಲ್ಲಿ ವಿಜಯ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡಲಿದ್ದು, 'ತಲೈವರ್ 171' ಮತ್ತು 'ಕೈತಿ 2' ಸಿನಿಮಾಗಳ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕವೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದೇನೆ ಎಂದು ಲೋಕೇಶ್ ತಿಳಿಸಿದ್ದಾರೆ. ಈ ಮೂಲಕ ದಳಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಿರ್ದೇಶಕರು, ಅವರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ,(ಏಜೆನ್ಸೀಸ್).