ನ್ಯೂಸ್

ಸರ್ಕಾರಿ ಕಚೇರಿಯಲ್ಲಿ ಹಣ ಕೇಳಿದ್ರೆ ಮಾತ್ರ ಅದು ಲಂಚ ನಾ? ಲೋಕಾ ಬಲೆಗೆ ಬಿದ್ದ ಭೂ ಅಧೀಕ್ಷಕ..!

ಬೀದರ್: ಇಲ್ಲೊಬ್ಬ ಭೂ ಅಧೀಕ್ಷಕ, ಸರ್ಕಾರಿ ಕಚೇರಿಯಿ ಹೊರಗೆ ಲಂಚ ಕೇಳಿದ್ರೆ ಸೇಫ್​ ಅಂದುಕೊಂಡಿದ್ದ ಎನಿಸುತ್ತೆ. ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ್, ಭೂ ಸರ್ವೇ ಸಂಬಂಧ ರೈತರನಿಂದ ಲಂಚ ಕೇಳಿದ್ದ. ಆದರೆ ಇದರ ವಾಸನೆ ಹಿಡಿದ ಲೋಕಾಯುಕ್ತರು ಈತನನ್ನು ಬಂಧಿಸಿದ್ದಾರೆ.

ಬೀದರನ ಭಾಲ್ಕಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಪಟ್ಟಣದ ಹೊರವಲಯದ ಢಾಬಾ ಒಂದರಲ್ಲಿ ಜಮೀನು ಸರ್ವೇ ಸಂಬಂಧ ರೈತನಿಂದ 40 ಸಾವಿರ ಬೇಡಿಕೆ ಇಟ್ಟಿದ್ದ. ಕಡೆಗೆ 5 ಸಾವಿರ ರೂಪಾಯಿ ನಗದು ಹಣ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದರು.

ಆರೋಪಿಯು ತಾಲ್ಲೂಕಿನ ಲಖನಗಾಂವ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ರಿಂದ ಹೊಲ ಸರ್ವೇಗಾಗಿ ಸುಮಾರು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ 15 ಸಾವಿರ ರೂಪಾಯಿ ಲಂಚಕ್ಕೆ ಒಪ್ಪಿದ್ದರು. ಭಾನುವಾರ 5 ಸಾವಿರ ರೂಪಾಯಿ ಹಣ ಮುಂಗಡ ಪಡೆಯುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ನೀಲಪ್ಪ ಓಲೇಕಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿ ಚಿತ್ತಣ್ಣ ಅವರನ್ನು ಬಂಧಿಸಿದ್ದಾರೆ.