ಲೋಕಾಯುಕ್ತ ಕಚೇರಿ 
ನ್ಯೂಸ್

ಸರ್ಕಾರಿ ನೌಕಕರ ಸಂಘದ ಮಾಜಿ ಅಧ್ಯಕ್ಷನಿಗೆ ಲೋಕಾ ಶಾಕ್

ಕೋಲಾರ: ಸರ್ಕಾರಿ ನೌಕಕರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಬಾಬುಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಲೋಕಾಯುಕ್ತ ಎಸ್‌ಪಿ ಧನಂಜಯï ನೇತೃತ್ವದಲ್ಲಿ ದಾಳಿ ನಡೆದಿದ್ದು, ನಗರದ ಹಾರೋಹಳ್ಳಿ ಮನೆಯಲ್ಲಿ 7.50 ಲಕ್ಷ ರೂ. ನಗದು, ಧರ್ಮರಾಯನಗರ, ಕೋಟೆ ಬಡಾವಣೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯಿರುವ ಕೆಮಿಕಲ್‌ ಫ್ಯಾಕ್ಟರಿ ಜಮೀನುಗಳಿಗೆ ಸಂಬಂಧಿಸಿದ 17 ಬಾಕ್ಸ್‌ಗಳಲ್ಲಿ ದಾಖಲೆ ಸಿಕ್ಕಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಶೋಧ ಕಾರ್ಯ ಮುಂದುವರಿದಿದ್ದು, ವಿವರಗಳನ್ನು ಕಲೆ ಹಾಕಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿ ಮತ್ತು ಸರ್ಕಾರಿ ದಾಖಲೆಗಳನ್ನು ಅನಧಿಕೃತ ಮನೆಯಲ್ಲಿ ಶೇಖರಿಸಿಟ್ಟಿರುವ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಸುರೇಶ್‌ಬಾಬು ಅಪ್ತರಾದ ಸುನೀಲ ಮತ್ತು ಸಂದೀಪ್ ಅವರ ಮನೆ ಮೇಲೂ ದಾಳಿ ನಡೆದಿದೆ. ಸದ್ಯಕ್ಕೆ ಸುರೇಶ್‌ಬಾಬು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.