ನ್ಯೂಸ್

17 ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾ ದಾಳಿ : 35 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆ

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಭೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಸೋಮವಾರ ಏಕಕಾಲದಲ್ಲಿ ಬೆಂಗಳೂರು ಸೇರಿ 11 ಜಿಲ್ಲೆಯಲ್ಲಿನ 17 ಸರ್ಕಾರಿ ಅಧಿಕಾರಿಗಳ ಕಚೇರಿ ಮತ್ತು ನಿವಾಸ ಸಂಬಂಧಿಕರ ನಿವಾಸ ಸೇರಿ 69 ಕಡೆ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿ ಇತರೆಡೆಗಳಲ್ಲಿ ತಡರಾತ್ರಿವರೆಗೆ ತಪಾಸಣೆ ನಡೆಸಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ಸೇರಿ 35 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಉಡುಪಿ, ಹಾಸನ, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಯಾವೆಲ್ಲಾ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ?
೧. ಕೆ.ಬಿ.ಚಂದ್ರಪ್ಪ, ಎಆರ್‌ಒ, ಹೆಗ್ಗನಹಳ್ಳಿ ಉಪ-ವಿಭಾಗ, ದಾಸರಹಳ್ಳಿ ವಲಯ, ಬಿಬಿಎಂಪಿ
ಮೂರು ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಸಿ, ೨.೦೯ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ೬.೫೦ ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟು ೨.೧೫ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಶೇ.೧೫೬.೦೯ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.
೨. ಎಸ್.ಆರ್.ಶ್ರೀನಿವಾಸ್, ಉಪ ನಿರ್ದೇಶಕ, ಬಾಯ್ಲರ್ ಮತ್ತು ಕಾರ್ಖಾನೆ, ದಾವಣಗೆರೆ
೧೦ ಸ್ಥಳಗಳಲ್ಲಿ ತಪಾಸಣೆ. ೨.೩೦ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ೫೯ ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ೨.೮೯ ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯವಾಗಿದ್ದು, ಶೇ.೨೯೦ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.

೩. ಎಂ.ಪಿ.ನಾಗೇಂದ್ರ ನಾಯ್ಕ, ಎಸಿಎಫ್, ಅರಣ್ಯ ಇಲಾಖೆ, ಚಿತ್ರದುರ್ಗ
ಮೂರು ಸ್ಥಳಗಳಲ್ಲಿ ಶೋಧ. ೫೧.೦೮ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೩೭ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೧.೮೮ ಕೋಟಿ ರೂ. ಮೌಲ್ಯದ ಆಸ್ತಿಯ ದಾಖಲೆಗಳು ಲಭ್ಯ. ಶೇ. ೨೦೧.೦೨ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಲಭ್ಯವಾಗಿದೆ.

೪. ವಿ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ
ಎರಡು ಜಾಗದಲ್ಲಿ ಶೋಧ. ೨೪.೧೨ ಲಕ್ಷ ರೂ.ಮೌಲ್ಯದ ಚರಾಸ್ತಿ, ೧.೨೬ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೧.೬೮ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. ಶೇ. ೨೧೪.೬೦ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆ

೫. ಎಂ.ನಾಗೇಂದ್ರಪ್ಪ, ಸಹಾಯಕ ಎಂಜಿನಿಯರ್, ಪ್ರೀಡ್ ಉಪವಿಭಾಗ, ಶಿರಾ, ತುಮಕೂರು
ಐದು ಸ್ಥಳಗಳಲ್ಲಿ ತಪಾಸಣೆ. ೯೭.೧೮ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೬೪ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೨.೬೧ ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.೨೨೦ ಆದಾಯ ಮೀರಿ ಆಸ್ತಿ ಪತ್ತೆ.

೬. ಶರಣಪ್ಪ ಪಟ್ಟೆದ್, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಶಕ್ತಿನಗರ, ರಾಯಚೂರು
ಐದು ಕಡೆ ಶೋಧ. ೪೦.೨೧ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೯ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೨.೩೦ ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.೧೨೯.೬ ಆದಾಯ ಮೀರಿದ ಆಸ್ತಿ ಲಭ್ಯ.

೭. ಕೆ.ಮಂಜುನಾಥ, ಕಂದಾಯ ಅಧಿಕಾರಿ, ತಹಶೀಲ್ದಾರ್ ಕಚೇರಿ, ಬಳ್ಳಾರಿ
ಮೂರು ಸ್ಥಳಗಳಲ್ಲಿ ತಪಾಸಣೆ ಕಾರ್ಯ. ೩೦.೭೯ ಲಕ್ಷ ರೂ.ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಸ್ಥಿರಾಸ್ತಿ ಇನ್ನು ಲೆಕ್ಕ ಹಾಕಲಾಗುತ್ತಿದೆ. ಶೇ. ೧೨೨.೨೮ ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆ.

೮.ಎಚ್.ರಾಜೇಶ್, ಸಹಾಯಕ ಆಯುಕ್ತ, ವಾಣಜ್ಯ ತೆರಿಗೆ, ಉಡುಪಿ
ಮೂರು ಸ್ಥಳಗಳಲ್ಲಿ ತಪಾಸಣೆ. ೧.೧೦ ಕೋಟಿ ರೂ. ಮೌಲ್ಯದ ಚರಾಸ್ತಿ, ೧ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೨,೧೦ ಕೋಟಿ ರೂ. ಮೌಲ್ಯದ ಆಸ್ತಿ ಲಭ್ಯ. ಶೇ.೧೪೩.೬೬ ಆದಾಯ ಮೀರಿದ ಆಸ್ತಿ ಗಳಿಕೆ ಪತ್ತೆಯಾಗಿದೆ.

೯. ಎನ್.ಪಿ. ಬಾಲರಾಜು, ಮುಖ್ಯ ಎಂಜಿನಿಯರ್, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಬೆಂಗಳೂರು
೪ ಸ್ಥಳಗಳ ಮೇಲೆ ಶೋಧ ಕಾರ್ಯ. ೧೦ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೧೨ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೧.೧೨ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೨೫೪.೦೮ ಆಸ್ತಿ ಪತ್ತೆಯಾಗಿದೆ.

೧೦. ಟಿ.ಎಂ.ಶಶಿಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್, ಪಟ್ಟಣ ಯೋಜನೆ, ಕೆಐಎಡಿಬಿ, ಬೆಂಗಳೂರು
೨ ಸ್ಥಳಗಳ ಮೇಲೆ ಶೋಧ ಕಾರ್ಯ. ೬೫ ಲಕ್ಷ ರೂ. ಮೌಲ್ಯದ ಚರಾಸ್ತಿ , ೬ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೬.೬೬ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೩೨೨ ಆಸ್ತಿ ಪತ್ತೆಯಾಗಿದೆ..

೧೧. ತಿಪ್ಪಣ್ಣಗೌಡ ಅನ್ನದಾನಿ, ಕಾರ್ಯನಿರ್ವಾಹಕ ಇಂಜಿನಿಯರ್, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕಲಬುರಗಿ
೪ ಸ್ಥಳಗಳ ಮೇಲೆ ಶೋಧ ಕಾರ್ಯ. ೯೨.೯೫ ಲಕ್ಷ ರೂ. ಚರಾಸ್ತಿ, ೧.೨೧ ಕೋಟಿ ರೂ. ಸ್ಥಿರಾಸ್ತಿ ಪತ್ತೆ. ಒಟ್ಟು ೨.೧೪ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. ಶೇ. ೧೬೧.೭ರಷ್ಟು ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.

೧೨. ಬಸವರಾಜ್, ವಲಯ ಅರಣ್ಯಾಧಿಕಾರಿ, ಬೀದರ್
೪ ಸ್ಥಳಗಳ ಮೇಲೆ ಶೋಧ ಕಾರ್ಯ. ೪೩ ಲಕ್ಷ ರೂ. ಮೌಲ್ಯದ ಚರಾಸ್ತಿ, ೨.೦೫ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೨.೪೮ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೧೫೫.೮ ಆಸ್ತಿ ಪತ್ತೆಯಾಗಿದೆ.

೧೩. ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ, ಜಂಟಿ ನಿರ್ದೇಶಕರು, ನಗರ ಯೋಜನೆ, ಕಲಬುರಗಿ
೬ ಸ್ಥಳಗಳ ಮೇಲೆ ಶೋಧ ಕಾರ್ಯ. ೨೩ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೫೪ ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಪತ್ತೆ. ಒಟ್ಟು ೧.೮೭ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೭೧.೭೯ ರಷ್ಟು ಆಸ್ತಿ ಪತ್ತೆಯಾಗಿದೆ.
೧೪. ಮಹಾದೇವ, ಎಇಇ, ತಾಲೂಕು ಪಂಚಾಯತ್, ಕಲಬುರಗಿ
೩ ಸ್ಥಳಗಳ ಮೇಲೆ ಶೋಧ ಕಾರ್ಯ. ೧.೮೫ ಕೋಟಿ ರೂ. ಮೌಲ್ಯದ ಚರಾಸ್ತಿ, ೩೬ ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೨.೩೯ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೬೦ ಆಸ್ತಿ ಪತ್ತೆಯಾಗಿದೆ.
೧೫. ಎಚ್.ಇ ನಾರಾಯಣ, ಕಿರಿಯ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರ್, ಹಾಸನ
೨ ಸ್ಥಳಗಳ ಮೇಲೆ ಶೋಧ ಕಾರ್ಯ. ೨೭.೮೧ ಲಕ್ಷ ರೂ. ಮೌಲ್ಯದ ಚರಾಸ್ತಿ, ೧.೧೩ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೧.೪೧ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೮೮.೭೩ ಆಸ್ತಿ ಪತ್ತೆಯಾಗಿದೆ.
೧೬. ಪರಮೇಶಪ್ಪ, ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ
೭ ಸ್ಥಳಗಳ ಮೇಲೆ ಶೋಧ ಕಾರ್ಯ. ೨೭.೮೧ ಲಕ್ಷ ರೂ.ಮೌಲ್ಯದ ಚರಾಸ್ತಿ, ೧.೧೩ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೨.೩೨ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೧೭೦.೭೭ ಆಸ್ತಿ ಪತ್ತೆಯಾಗಿದೆ.
೧೭. ಮಹಾಂತೇಶ ಸದಾನಂದ ನ್ಯಾಮತಿ, ವಲಯ ಅರಣ್ಯಾಧಿಕಾರಿ, ಹಾವೇರಿ.
೩ ಸ್ಥಳಗಳ ಮೇಲೆ ಶೋಧ ಕಾರ್ಯ. ೫೦ ಲಕ್ಷ ರೂ. ಮೌಲ್ಯದ ಚರಾಸ್ತಿ, ೧ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ೧.೫೦ ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ. ಆದಾಯಕ್ಕೂ ಮೀರಿ ಶೇ.೯೮.೭೫ ಆಸ್ತಿ ಪತ್ತೆಯಾಗಿದೆ.