ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲಿಸಿದರು. 
ನ್ಯೂಸ್

ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ಗೆ ಅಧಿಕಾರಿಗಳ ಭೇಟಿ

ಬಣಕಲ್: ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಸೂಕ್ಷ್ಮ ಪ್ರದೇಶ ಹಾಗೂ ಗಡಿ ಪ್ರದೇಶ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭೇಟಿ ನೀಡಿದರು. ಮೂಡಿಗೆರೆ ತಾಲೂಕಿನ ಗಡಿ ಭಾಗಗಳಾದ ಬಾಳೂರು, ಕೊಟ್ಟಿಗೆಹಾರ, ಜನ್ನಾಪುರ, ಕಸ್ಕೇಬೈಲ್, ಕಿರುಗುಂದ, ಕೊಲ್ಲಿಬೈಲ್ ಗಡಿ ಪ್ರದೇಶಗಳನ್ನು ಗುರುತಿಸಿ ಅಧಿಕಾರಿಗಳ ಜತೆ ಚರ್ಚಿಸಿದರು.
ಗಡಿ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಪೊಲೀಸ್ ನಾಕಾಬಂದಿ, ತಪಾಸಣೆ ಮತ್ತಿತರ ಸೂಕ್ತ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು. ಎಸ್ಪಿ ವಿಕ್ರಂ ಅಮಟೆ, ಎಸಿ ದಲ್ಜಿತ್ ಸಿಂಗ್, ತಹಸೀಲ್ದಾರ್ ಶೈಲೇಶ್ ಎಂ.ಪರಮಾನಂದ, ಬಣಕಲ್ ಸಬ್ ಇನ್ಸ್‌ಪೆಕ್ಟರ್ ಕೌಶಿಕ್ ಇತರರಿದ್ದರು.