ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾಥಿರ್ಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಶನ್ (ಎಸ್ಎಫ್ಐ) ನೇತೃತ್ವದಲ್ಲಿ ಸೋಮವಾರ ವಿದ್ಯಾಥಿರ್ಗಳು ಪ್ರತಿಭಟನೆ ನಡೆಸಿದರು.
2012ರಲ್ಲಿ ಪ್ರಾರಂಭವಾದ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಬಾಡಿಗೆ ರೂಪದಲ್ಲಿ ದನಕರುಗಳ ಕೂಡಿಹಾಕುವ ತಗಡಿನ ಗೋದಾಮಿನಲ್ಲಿ ವಿದ್ಯಾಥಿರ್ಗಳು ವಾಸಿಸುತ್ತಿದ್ದಾರೆ. 124 ವಿದ್ಯಾಥಿರ್ಗಳ ಬಳಕೆಗೆ 4 ಬಕೇಟ್, 2 ಚಂಬು, ಮೂರು ಶೌಚಗೃಹ, 3 ಸ್ನಾನದ ಕೊಠಡಿಗಳಿವೆ. ಹೀಗಾಗಿ ವಿದ್ಯಾಥಿರ್ಗಳು ಸ್ನಾನ ಮಾಡಿ ಕಾಲೇಜ್ಗೆ ಹೋಗಲು ಆಗದ ಪರಿಸ್ಥಿತಿಯಿದೆ. ಅಧಿಕಾರಿಗಳು ಮಕ್ಕಳಿಗೆ ನೀಡುವ ಸೌಲಭ್ಯದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹೀಗಾಗಿ ಇಂದಿಗೂ ಹಾಸ್ಟೇಲ್ನಲ್ಲಿ ಯಾವುದೆ ಸೌಲಭ್ಯ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ವಿದ್ಯಾಥಿರ್ಗಳಿಗೆ ಅನುಗುಣವಾಗಿ ಕೊಠಡಿಗಳನ್ನು ನೀಡಬೇಕು. ಸ್ನಾನದ ಗೃಹ, ಶೌಚಗೃಹ ನಿಮಿರ್ಸಿಕೊಡಬೇಕು. ಗ್ರಂಥಾಲಯ, ಪುಸ್ತಕ ಸೇರಿ ಅಗತ್ಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್., ತಾಲೂಕು ಅಧ್ಯಕ್ಷ ಗೌತಮ ಸಾವಕ್ಕನವರ, ಉಪಾಧ್ಯಕ್ಷ ಬಸವರಾಜ ಕೊಣಸಾಲಿ, ಕೃಷ್ಣ ಇಂದಿಯನ್ನರ, ಭೀಮಣ್ಣ ಎಸ್.ಎ., ನಿಂಗರಾಜ ನೇಕಿರ್, ಅರುಣ ಜೋಗೇರ, ಅಭಿಷೇಕ ಕ್ವಾಗನೂರ, ಶಿವರಾಜ ಭೋವಿ, ದಿಲೀಪ ಎಸ್.ಎಚ್., ನವೀನ ಸುಂಕಪುರ, ಚಂದ್ರಶೇಖರ ಕರ್ಜಗಿ ಮತ್ತಿತರರು ಇದ್ದರು.