ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳಬೇಕಿದ್ದ 200ಕ್ಕೂ ಹೆಚ್ಚು ಶಿಕ್ಷಕರು ರಸ್ತೆಬದಿಯಲ್ಲೇ ನಿಂತು ತಾಸುಗಟ್ಟಲೇ ಪರದಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಹುಬ್ಬಳಿಯ 200ಕ್ಕೂ ಹೆಚ್ಚು ಶಿಕ್ಷಕರು ಮೌಲ್ಯಮಾಪನ ಕೆಲಸ ನಿಮಿತ್ತ ಧಾರವಾಡದ ಸೆಂಟರ್ ಹೋಗುತ್ತಿದ್ದರು. ಆದರೀಗ ಧಾರವಾಡ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರ ಎಫೆಕ್ಟ್ ಶಿಕ್ಷಕರ ಮೇಲೂ ಬೀರಿದೆ. ಇತ್ತ ಮೌಲ್ಯಮಾಪನಕ್ಕೆ ತಪ್ಪಿಸಿಕೊಳ್ಳುವಂತಿಲ್ಲ, ಅತ್ತ ಕೆಸಲಕ್ಕೆ ಹೋಗಲೂ ಆಗದ ಸಂದಿಗ್ಧ ಪರಿಸ್ಥಿತಿಗೆ ಶಿಕ್ಷಕರು ಸಿಲುಕಿದ್ದರು. ಇದನ್ನೂ ಓದಿರಿ ಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್
ಮೌಲ್ಯಮಾಪನ ಕೆಲಸಕ್ಕೆ ತೆರಳುವ ಶಿಕ್ಷಕರಿಗೆ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೇ ಬಸ್ ವ್ಯವಸ್ಥೆ ಮಾಡಬೇಕಿತ್ತು. ಈ ಬಗ್ಗೆ ಪರಿವೇ ಇಲ್ಲದಂತೆ ಜಿಲ್ಲಾಡಳಿತ ವರ್ತಿಸಿದ್ದು, ಶಿಕ್ಷಕರು ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರು ಬಸ್ಗಾಗಿ ಕಾಯುತ್ತ ಪರಿತಪಿಸಿದರು.
ಇತ್ತ ಹುಬ್ಬಳ್ಳಿಯಲ್ಲಿ ಕೆಲವರು ಲಾಕ್ಡೌನ್ ಇದ್ದರೂ ಅನಗತ್ಯವಾಗಿ ಮನೆಯಿಂದ ಹೊರ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಲು, ದಿನಸಿ, ತರಕಾರಿ ಖರೀದಿ ನೆಪದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಜನರಿಗೆ ವಾಹನಗಳನ್ನು ಸೀಜ್ ಮಾಡುವ ಮೂಲಕ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.