ನ್ಯೂಸ್

ಮದ್ಯದಂಗಡಿ ಆರಂಭಕ್ಕೆ ಸ್ಥಳೀಯರ ವಿರೋಧ

ಕೋಟ: ಇಲ್ಲಿನ ಸಾಸ್ತಾನದ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿ ರಸ್ತೆ ಸಮೀಪ ನಿರ್ಮಾಣಗೊಳ್ಳಲಿರುವ ಮದ್ಯದಂಗಡಿಯ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

ಸ್ಥಳೀಯವಾಗಿ ಶಿಶುಮಂದಿರ, ಪಶು ಆಸ್ಪತ್ರೆ ಸೇರಿದಂತೆ ಅನೇಕ ಮನೆಗಳಿದ್ದು, ಮದ್ಯದಂಗಡಿ ತೆರೆದರೆ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ ಎಂದು ಹೋರಾಟ ಸಮಿತಿ ಪ್ರಮುಖರಾದ ರಶಿರಾಜ್ ಸಾಸ್ತಾನ ಐರೋಡಿ ಗ್ರಾಪಂಗೆ ಮನವಿ ನೀಡಿದರು. ಪಂಚಾಯಿತಿ ಅಧ್ಯಕ್ಷೆ ಸಕು ,ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಮನವಿ ಸ್ವೀಕರಿಸಿದರು. ಪಂಚಾಯಿತಿ ಸದಸ್ಯ ನವೀನ್ ಕಾರಂತ್, ಗ್ರಾಮಸ್ಥರು ಉಪಸ್ಥಿತರಿದ್ದರು.