ನ್ಯೂಸ್

ಕ್ವಾರಂಟೈನ್ ಕೇಂದ್ರದ ಉಪಾಹಾರದಲ್ಲಿ ಹಲ್ಲಿ ಪತ್ತೆ!

kumarvrl

ಕಾಳಗಿ (ಕಲಬುರಗಿ): ಮುಂಬೈನಿಂದ ಆಗಮಿಸಿದ ವಲಸಿಗರನ್ನು ಕ್ವಾರಂಟೈನ್ ಮಾಡಿರುವ ಕೋರವಾರ ಗ್ರಾಮದ ನವೋದಯ ವಿದ್ಯಾಲಯ ಕೇಂದ್ರದಲ್ಲಿ ಮಂಗಳವಾರ ಬೆಳಗಿನ ಉಪಾಹಾರದಲ್ಲಿ ಸತ್ತು ಬಿದ್ದ ಹಲ್ಲಿ ಪತ್ತೆಯಾಗಿದೆ!

ಮೂರ‌್ನಾಲ್ಕು ಜನ ಸೋಂಕಿತರು ಇರುವ ಈ ಕೇಂದ್ರದಲ್ಲಿ ಸುಮಾರು 450 ಜನರು ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಮಂಗಳವಾರ ಬೆಳಗ್ಗೆ ಮಾಡಿದ್ದ ಅವಲಕ್ಕಿ ಉಪಾಹಾರದಲ್ಲಿ ಸತ್ತ ಹಲ್ಲಿ ಕಾಣಿಸಿದೆ. ಸಿಟ್ಟಿಗೆದ್ದ ಅಲ್ಲಿನ ವಾಸಿಗಳು ಅಡುಗೆ ಮಾಡುವವರನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಉಪಾಹಾರ ತ್ಯಜಿಸಿ ತಟ್ಟೆಯಲ್ಲಿದ್ದ ಹಲ್ಲಿಯ ಫೋಟೋ ವಿಡಿಯೋ ತೆಗೆದು ವೈರಲ್ ಮಾಡುವ ಮೂಲಕ ಸಂಬಂಧಿತ ಅಧಿಕಾರಿ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಶಾಸಕ ಡಾ.ಅವಿನಾಶ ಜಾಧವ್, ಮಾಹಿತಿ ಪಡೆದು ತನಿಖೆಗೆ ಆದೇಶಿಸಿದ್ದಾರೆ. ಅಡುಗೆ ಮಾಡುತ್ತಿರುವವರನ್ನು ತಕ್ಷಣವೇ ತೆಗೆದು ಹೊಸಬರನ್ನು ನೇಮಿಸುವಂತೆ ಸೂಚಿಸಿದ್ದಾರೆ.