ನ್ಯೂಸ್

BMW ಕಾರು ಗುದ್ದಿದ ರಭಸಕ್ಕೆ ಸ್ಕೂಟಿಯಿಂದ ಹಾರಿ ಬಿದ್ದ ಯುವತಿಯರು ಸ್ಥಳದಲ್ಲೇ ಸಾವು

ಮಧ್ಯಪ್ರದೇಶ:  ಬಿಎಂಡಬ್ಲ್ಯು ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಲಕ್ಷ್ಮೀತೋಮರ್ (24) ಮತ್ತು ದೀಕ್ಷಾ ಜಾದನ್ (25) ಮೃತ ಯುವತಿಯರು. ದೀಕ್ಷಾ ಜದೌನ್ ಸಭೆಯ ಸ್ಥಳದ ನಿವಾಸಿಯಾಗಿದ್ದು,  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಸ್ನೇಹಿತೆ ಲಕ್ಷ್ಮಿ ತೋಮರ್ ಕೂಡ ಆಕೆಯ ಜೊತೆ ಕೆಲಸ ಮಾಡುತ್ತಿದ್ದರು. ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ಶನಿವಾರ ರಾತ್ರಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಖಜರಾನಾ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದರು. ಅಷ್ಟರಲ್ಲಿ ರಾಂಗ್ ರೂಟ್ ನಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್​ ಸೇರಿದಂತೆ ಇಬ್ಬರೂ  ಯುವತಿಯರೂ ಕೆಲವು ಅಡಿ ಎತ್ತರಕ್ಕೆ ಹಾರಿ ದೂರ ಬಿದ್ದಿದ್ದಾರೆ. ಈ ಅಪಘಾತದಲ್ಲಿ ಇಬ್ಬರು ಯುವತಿಯರ ತಲೆಗೆ ಗಂಭೀರ ಗಾಯಗಳಾಗಿವೆ.

ಅಪಘಾತವಾದ ತಕ್ಷಣ ಕಾರನ್ನು ಅಲ್ಲೇ ಬಿಟ್ಟು ಚಾಲಕ ಓಡಿ ಹೋಗಿದ್ದಾನೆ. ಸ್ಥಳೀಯರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಬ್ಬರೂ ಕೊನೆಯುಸಿರೆಳೆದಿದ್ದಾರೆ.

ಪೊಲೀಸರು BMW ಚಾಲಕ ಗಜೇಂದ್ರ ಪ್ರತಾಪ್ ವಿರುದ್ಧ ಕೊಲೆಯ ಸೆಕ್ಷನ್ 181 125 A 106 A 105 BNS ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇಂದೋರ್ ನಿವಾಸಿ ಸರ್ದಾರ್ ಸಿಂಗ್ ಗುರ್ಜರ್ ಎಂಬಾತನನ್ನು ಬಂಧಿಸಲಾಗಿದೆ.  ಕಾರು ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.