ನ್ಯೂಸ್

LIVE| ಪದ್ಮಪುರಸ್ಕಾರ 2020 ಪ್ರಕಟ: ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥರಿಗೆ ಪದ್ಮವಿಭೂಷಣ, ಡಾ.ವಿಜಯ ಸಂಕೇಶ್ವರ ಸೇರಿ 8 ಕನ್ನಡಿಗರಿಗೆ ಪದ್ಮಶ್ರೀ ಗೌರವ

ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥರಿಗೆ ಪದ್ಮವಿಭೂಷಣ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್​ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಡಾ.ವಿಜಯಸಂಕೇಶ್ವರ ಸೇರಿ 8 ಕನ್ನಡಿಗರಿಗೆ ಪದ್ಮ ಪುರಸ್ಕಾರ ಒಲಿದಿದೆ. ಈ ವರ್ಷ 141 ಪದ್ಮ ಪುರಸ್ಕೃತರು ಇದ್ದು, ಇದರಲ್ಲಿ 4 ಪ್ರಶಸ್ತಿಗಳನ್ನು ಎಂಟು ಮಂದಿಗೆ (ಇಬ್ಬರು ಸಾಧಕರಿಗೆ ಒಂದು ಪ್ರಶಸ್ತಿ) ನೀಡಲು ತೀರ್ಮಾನಿಸಲಾಗಿದೆ. ಪದ್ಮ ಪುರಸ್ಕಾರ ಭಾಜನರ ಪಟ್ಟಿಯಲ್ಲಿ ಏಳು ಪದ್ಮ ವಿಭೂಷಣ, 16 ಪದ್ಮ ಭೂಷಣ, 118 ಪದ್ಮಶ್ರೀ ಪುರಸ್ಕೃತರ ಹೆಸರುಗಳಿವೆ. ಈ ಪೈಕಿ 34 ಮಹಿಳೆಯರು, 18 ವಿದೇಶೀಯರು, ಎನ್​ಐಆರ್​ಗಳಿದ್ದಾರೆ. 12 ಮರಣೋತ್ತರ ಪ್ರಶಸ್ತಿ.  ಪುರಸ್ಕೃತರ ವಿವರ ಇಂತಿದೆ. 

ಪದ್ಮವಿಭೂಷಣರು ಇವರು
1. ದಿವಂಗತ ಜಾರ್ಜ್ ಫರ್ನಾಂಡಿಸ್ (ಪಬ್ಲಿಕ್ ಅಫೇರ್ಸ್​)
2. ದಿವಂಗತ ಅರುಣ್ ಜೇಟ್ಲಿ (ಪಬ್ಲಿಕ್ ಅಫೇರ್ಸ್​)
3. ಅನಿರುದ್ ಜಗನ್ನಾಥ್, ಮಾರಿಷಸ್ (ಪಬ್ಲಿಕ್ ಅಫೇರ್ಸ್​)
4. ಮೇರಿ ಕೋಂ (ಕ್ರೀಡೆ)
5. ಛನ್ನುಲಾಲ್ ಮಿಶ್ರಾ (ಕಲೆ)
6. ಸುಷ್ಮಾ ಸ್ವರಾಜ್ (ಪಬ್ಲಿಕ್ ಅಫೇರ್ಸ್​)
7. ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ( ಇತರೆ- ಧಾರ್ಮಿಕ)

ಪದ್ಮಭೂಷಣರು

1. ಶ್ರೀ ಎಂ. ಮುಮ್ತಾಜ್ ಅಲಿ (ಶ್ರೀ ಎಂ) (ಇತರೆ-ಧಾರ್ಮಿಕ)
2. ದಿವಂಗತ ಸಯ್ಯದ್ ಮೌಝೀಮ್ ಅಲಿ (ಬಾಂಗ್ಲಾದೇಶ) (ಪಬ್ಲಿಕ್ ಅಫೇರ್ಸ್​)
3. ಮುಜಾಫರ್ ಹುಸ್ಸೇನ್ ಬೇಗ್ (ಪಬ್ಲಿಕ್ ಅಫೇರ್ಸ್​)
4. ಅಜೋಯ್ ಚಕ್ರವರ್ತಿ (ಕಲೆ)
5. ಮನೋಜ್ ದಾಸ್​ (ಸಾಹಿತ್ಯ ಮತ್ತು ಶಿಕ್ಷಣ)
6. ಬಾಲಕೃಷ್ಣ ದೋಷಿ(ಇತರೆ-ಆರ್ಕಿಟೆಕ್ಚರ್​)
7. ಕೃಷ್ಣಮ್ಮಾಳ್ ಜಗನ್ನಾಥ್​(ಸಾಮಾಜಿಕ ಕಾರ್ಯ)
8. ಎಸ್​.ಸಿ.ಜಮೀರ್​ (ಪಬ್ಲಿಕ್ ಅಫೇರ್ಸ್​)
9. ಅನಿಲ್ ಪ್ರಕಾಶ್ ಜೋಷಿ (ಸೋಷಿಯಲ್ ವರ್ಕ್​)
10. ಡಾ.ತ್ಸೆರಿಂಗ್ ಲಂಡೋಲ್ (ವೈದ್ಯಕೀಯ)
11. ಆನಂದ್ ಮಹೀಂದ್ರಾ (ವ್ಯಾಪಾರ ಮತ್ತು ಕೈಗಾರಿಕೆ)
12. ದಿವಂಗತ ನೀಲಕಂಠ ರಾಮಕೃಷ್ಣ ಮಾಧವ ಮೆನನ್​(ಪಬ್ಲಿಕ್ ಅಫೇರ್ಸ್​)
13 ದಿವಂಗತ ಮನೋಹರ ಪರಿಕ್ಕರ್​ (ಪಬ್ಲಿಕ್ ಅಫೇರ್ಸ್​)
14. ಪ್ರೊ.ಜಗದೀಶ್ ಶೇಠ್ (ಸಾಹಿತ್ಯ ಮತ್ತು ಶಿಕ್ಷಣ)
15. ಪಿ.ವಿ.ಸಿಂಧು (ಕ್ರೀಡೆ)
16 ವೇಣು ಶ್ರೀನಿವಾಸ್ (ವ್ಯಾಪಾರ ಮತ್ತು ಕೈಗಾರಿಕೆ)

ಪದ್ಮಶ್ರೀ ಭಾಜನರು ಕರ್ನಾಟಕದವರು

1. ಡಾ.ವಿಜಯ ಸಂಕೇಶ್ವರ (ವ್ಯಾಪಾರ ಮತ್ತು ಕೈಗಾರಿಕೆ)
2. ಕೆ.ವಿ.ಸಂಪತ್ ಕುಮಾರ್ ಮತ್ತು ವಿಧುಷಿ ಜಯಲಕ್ಷ್ಮಿ ಕೆ.ಎಸ್ (ಸಾಹಿತ್ಯ ಮತ್ತು ಶಿಕ್ಷಣ, ಪತ್ರಿಕೋದ್ಯಮ)
3. ಹರೇಕಳ ಹಾಜಬ್ಬ (ಸಾಮಾಜಿಕ ಕಾರ್ಯ)
4. ತುಳಸಿ ಗೌಡ (ಸಾಮಾಜಿಕ ಕಾರ್ಯ)
5. ಎಂ.ಪಿ.ಗಣೇಶ್ (ಕ್ರೀಡೆ)
6. ಡಾ.ಬೆಂಗಳೂರು ಗಂಗಾಧರ್ (ವೈದ್ಯಕೀಯ)
7. ಭರತ್ ಗೋಯೆಂಕಾ (ವ್ಯಾಪಾರ ಮತ್ತು ಕೈಗಾರಿಕೆ)

8.50 PM: ಪಬ್ಲಿಕ್ ಅಫೇರ್ಸ್ ಕ್ಷೇತ್ರದಲ್ಲಿ ಮನೋಹರ ಪರಿಕ್ಕರ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣದ ಗೌರವ. 

8.45 PM: ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡಿಸ್​ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪುರಸ್ಕಾರ, ಕ್ರೀಡಾ ತಾರೆ ಬಾಕ್ಸಿಂಗ್ ಪಟು ಮೇರಿ ಕೋಂ ಅವರಿಗೂ ಪದ್ಮವಿಭೂಷಣದ ಗೌರವ. ಉದ್ಯಮಿ ಆನಂದ್ ಮಹೀಂದ್ರಾ, ಕ್ರೀಡಾ ತಾರೆ ಪಿ.ವಿ. ಸಿಂಧುಗೆ ಪದ್ಮ ಭೂಷಣದ ಗೌರವ. 

7.33 PM:  ಜಗೀಶ್ ಜಲ್ ಅಹುಜಾ, ಮೊಹಮ್ಮದ್ ಶರೀಫ್, ತುಳಸಿ ಗೌಡ, ಮುನ್ನಾ ಮಾಸ್ಟರ್ ಸೇರಿ 21 ಸಾಧಕರಿಗೆ ಪದ್ಮಶ್ರೀ 2020 ಪುರಸ್ಕಾರಕ್ಕೆ ಭಾಜನರು. 

7.30 PM: ಭೋಪಾಲ ಅನಿಲ ದುರಂತ (1984)ದ ಆ್ಯಕ್ಟಿವಿಸ್ಟ್ ಅಬ್ದುಲ್ ಜಬ್ಬಾರ್​ಗೆ ಪದ್ಮಶ್ರೀ ಪುರಸ್ಕಾರ ಮರಣೋತ್ತರವಾಗಿ ನೀಡಲಾಗುತ್ತಿದೆ. 2019ರ ನವೆಂಬರ್​ 14ರಂದು ಅವರು ಅಸ್ತಂಗತರಾಗಿದ್ದಾರೆ.