ಕಾಸರಗೋಡು: ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಸೇವಿಸಲಾರದೆ ಖಿನ್ನರಾಗುವವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಕೇರಳ ಸರ್ಕಾರ ಮನೆಗಳಿಗೇ ಮದ್ಯ ಪೂರೈಕೆ ಮಾಡಲಿದೆ. ವೈದ್ಯರ ಶಿಫಾರಸು ಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀಟರ್ ಮದ್ಯ ನೀಡಲು ಅಬಕಾರಿ ಇಲಾಖೆ ಸಿದ್ಧವಾಗಿದೆ.
ಔಟ್ಲೆಟ್ನ ನಿಗದಿತ ಬೆಲೆಗೆ ಪೂರೈಕೆ ಮಾಡಲಿದ್ದು, ನೂರು ರೂ. ಸರ್ವೀಸ್ ಚಾರ್ಜ್ ಪಡೆಯಲಾಗುವುದು. ರಮ್ ಮತ್ತು ಬ್ರಾಂಡಿ ಮಾತ್ರ ವಿತರಣೆ ಮಾಡಲಾಗುವುದು. ಇಬ್ಬರು ಸಿಬ್ಬಂದಿಯನ್ನು ಇದಕ್ಕೆ ಬಳಸಿಕೊಳ್ಳಲಾಗುವುದು. ಈ ವಾಹನಕ್ಕೆ ಪರವಾನಗಿ ಪತ್ರ ಹಾಗೂ ಸಿಬ್ಬಂದಿಗೆ ವಿಶೇಷ ಗುರುತಿನ ಚೀಟಿಯೂ ಇರಲಿದೆ. ಮದ್ಯ ಸಾಗಾಟದ ವಾಹನಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಬೆಂಗಾವಲಿಗೆ ತರಳಬೇಕೆಂದೂ ಬೆವರೇಜಸ್ ಕಾಪೋರೇಶನ್ ಎಂ.ಡಿ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.