ರಾಣೆಬೆನ್ನೂರ: ಇಲ್ಲಿಯ ಲಯನ್ಸ್ ಕ್ಲಬ್, ಸಿದ್ದೇಶ್ವರ ಕೋ ಅಪರೇಟಿವ್ ಬ್ಯಾಂಕ್ ವತಿಯಿಂದ ನಗರದ ಲಯನ್ಸ್ ಶಾಲೆಯಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ ನಡೆಯಿತು.
ಎಂಜಿಇ ಸೊಸೈಟಿ ಅಧ್ಯಕ್ಷ ಎಂ.ಎಸ್. ಅರಕೇರಿ ಸಮಾರಂಭ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅಧ್ಯಕ್ಷತೆ ವಹಿಸಿದ್ದರು. ನಂದೀಶ ಶೆಟ್ಟರ ವ್ಯಕ್ತಿತ್ವ ವಿಕಸನ ತರಬೇತಿ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಜಟ್ಟೆಪ್ಪ ಕರೆಗೌಡ್ರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಡಿಕ್ಷನರಿ ನೀಡಿದರು.
ಪ್ರಮುಖರಾದ ಪರಮೇಶಪ್ಪ ಗೂಳಣ್ಣನವರ, ಗುತ್ತೆಪ್ಪ ಹಳೆಮನಿ, ಜೆ.ಎಂ. ಮಠದ, ಮಧು ಕೋಳಿವಾಡ, ಅಶೋಕ ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಬಸವರಾಜ ಬಡಿಗೇರ, ಶಿವಪ್ಪ ಗುರಿಕಾರ, ಆರ್.ವಿ. ಸುರಗೊಂಡ, ಎಂ.ಎಚ್. ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.