ಗಾಂಧಿನಗರ: ಗುಜರಾತ್ನ ಬೊಟಾಡ್ ಜಿಲ್ಲೆಯಲ್ಲಿರುವ ಇಟಾರಿಯಾ ಗ್ರಾಮವೊಂದರಲ್ಲಿ ತೆರೆದ ಬಾವಿಗೆ ಬಿದ್ದು, ಸಿಂಹಿಣಿವೊಂದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಈ ಘಟನೆಯು ಮಂಗಳವಾರ ರಾತ್ರಿ ಸಂಭವಿಸಿದ್ದು, ಬುಧವಾರ ಬೆಳಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ (ಗಡಾದ) ಐಎಸ್ ಪ್ರಜಾಪತಿ ತಿಳಿಸಿದ್ದಾರೆ.
ಸಿಂಹಿಣಿಯ ಮೃತದೇಹವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
"ಜಿಲ್ಲೆಯ ಗಧಾಡಾ ತಾಲೂಕಿನ ಇಟಾರಿಯಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ರೈತನಿಗೆ ಸೇರಿದ ತೆರೆದ, ಅಸುರಕ್ಷಿತ ಬಾವಿಗೆ ಸಿಂಹಿಣಿ ಬಿದ್ದಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯ ಪ್ರದೇಶದ ಸುತ್ತಲಿನ ಕಂದಾಯ ಜಮೀನುಗಳ ತೆರೆದ ಬಾವಿಗಳಲ್ಲಿ ಸಿಂಹಗಳು ಸಾವನ್ನಪ್ಪಿದ ಹಲವಾರು ಘಟನೆಗಳು ವರದಿಯಾಗಿದೆ.